Thursday, June 25, 2026
Homeಕರಾವಳಿಮಂಗಳೂರುಮಂಗಳೂರು; ಅಪ್ರಾಪ್ತನಿಗೆ ಸ್ಕೂಟರ್ ಚಲಾಯಿಸಲು ನೀಡಿದ ಪೋಷಕರಿಗೆ 27,500 ರೂ. ದಂಡ

ಮಂಗಳೂರು; ಅಪ್ರಾಪ್ತನಿಗೆ ಸ್ಕೂಟರ್ ಚಲಾಯಿಸಲು ನೀಡಿದ ಪೋಷಕರಿಗೆ 27,500 ರೂ. ದಂಡ

- Advertisement -
- Advertisement -

ಮಂಗಳೂರು; ಅಪ್ರಾಪ್ತನಿಗೆ ಸ್ಕೂಟರ್ ಚಲಾಯಿಸಲು ನೀಡಿದ ಪೋಷಕರಿಗೆ ದಂಡ ವಿಧಿಸಿದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಿನಾಂಕ: 25-08-2025 ರಂದು ಬಜಪೆ ಪೊಲೀಸ್ ಠಾಣೆಯ ಪಿಎಸ್‌ಐ ರವರು ಸಿಬ್ಬಂದಿಯೊಂದಿಗೆ ಸಾಯಂಕಾಲ 6-35 ಗಂಟೆಯ ಸಮಯಕ್ಕೆ ಬಜಪೆ ಪೇಟೆ ಎಂಬಲ್ಲಿ ವಾಹನ ತಪಾಸಣೆಯ ಮಾಡುತ್ತಿದ್ದಾಗ ಟ್ರಿಪಲ್ ರೈಡ್ ಮಾಡಿಕೊಂಡು ಬಂದ ಸ್ಕೂಟರನ್ನು ನಿಲ್ಲಿಸಿ ವಿಚಾರಿಸಿ ದಾಖಲಾತಿಗಳನ್ನು ಪರಿಶೀಲಿಸಿದಾಗ  ಸ್ಕೂಟರನ್ನು ಅಪ್ರಾಪ್ತ ವಯಸ್ಸಿನ  ಬಾಲಕನು ಚಲಾಯಿಸಿಕೊಂಡು ಬಂದಿದ್ದು, ಹಿಂಬದಿ ಸೀಟಿನಲ್ಲಿ ಇಬ್ಬರು ಸವಾರರು ಇದ್ದದ್ದು ಗೊತ್ತಾಗಿದೆ. ಅಲ್ಲದೇ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸ್ಕೂಟರನ್ನು ಚಲಾಯಿಸಲು ಪೋಷಕರು ವಾಹನವನ್ನು ನೀಡಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ   ಬಜಪೆ ಪೊಲೀಸರು ಕಲಂ 199ಎ, 194ಸಿ, 194ಡಿ, 130 ಜೊತೆಗೆ 177 ಐಎಮ್‌ವಿ ಆಕ್ಟ್ ಅಡಿಯಲ್ಲಿ ದೋಷರೋಪಣ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಸ್ಕೂಟರಿನ ಮಾಲಕರಿಗೆ 27500 /- ದಂಡವನ್ನು ವಿಧಿಸಿರುತ್ತದೆ.

- Advertisement -

Latest News

error: Content is protected !!