Wednesday, June 24, 2026
HomeWorldವಶಕ್ಕೆ ಪಡೆದಿದ್ದ ಬಿಎಸ್‌ಎಫ್‌ ಯೋಧನನ್ನು ಬಿಟ್ಟು ಕಳಿಸಿದ ಪಾಕಿಸ್ತಾನ

ವಶಕ್ಕೆ ಪಡೆದಿದ್ದ ಬಿಎಸ್‌ಎಫ್‌ ಯೋಧನನ್ನು ಬಿಟ್ಟು ಕಳಿಸಿದ ಪಾಕಿಸ್ತಾನ

- Advertisement -
- Advertisement -

ನವದೆಹಲಿ: ಪಾಕಿಸ್ತಾನವು ಏಪ್ರಿಲ್.‌23ರಿಂದ ಪಡೆದಿದ್ದ ಬಿಎಸ್‌ಎಫ್‌ ಕಾನ್ಸ್‌ಸ್ಟೇಬಲ್‌ ಪೂರ್ಣಮ್‌ ಕುಮಾರ್‌ ಅವರನ್ನು ಇಂದು ಬೆಳಿಗ್ಗೆ 10.30ರ ಸುಮಾರಿಗೆ ಅಮೃತಸರದ ಅಟ್ಟಾರಿಯ ಜಂಟಿ ಚೆಕ್‌ಪೋಸ್ಟ್‌ನಲ್ಲಿ ಅಧಿಕೃತವಾಗಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಪೂರ್ಣಮ್‌ ಕುಮಾರ್‌ ಅವರು ಏಪ್ರಿಲ್.‌23ರಂದು ಪಂಜಾಬ್‌ನ್ ಫಿರೋಜ್‌ಪುರ ಜಿಲ್ಲೆಯ ಮಾಮ್‌ಡೋಟ್‌ ಸೆಕ್ಟರ್‌ನಲ್ಲಿ ಬಿಎಸ್‌ಎಫ್‌ನ 182ನೇ ಬೆಟಾಲಿಯನ್‌ ಕಾನ್ಸ್‌ಸ್ಟೇಬಲ್‌ ಪೂರ್ಣಮ್‌ ಕುಮಾರ್‌ ಶಾ ಅವರು ಗಡಿ ಸಮೀಪದ ರೈತರಿಗೆ ರಕ್ಷಣೆ ನೀಡುವ ಕಿಸಾನ್‌ ಗಾರ್ಡ್‌ ಕರ್ತವ್ಯದಲ್ಲಿದ್ದಾಗ ತಪ್ಪಾಗಿ ಪಾಕಿಸ್ತಾನದ ಗಡಿಗೆ ದಾಟಿದರು. ಈ ವೇಳೆ ಪಾಕ್‌ ರೇಂಜರ್‌ಗಳು ಅವರನ್ನು ಬಂಧಿಸಿದ್ದರು.

ಇನ್ನು ನಿನ್ನೆಯಷ್ಟೆ ಅಧಂಪುರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್‌ಗೆ ಖಡಕ್‌ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಇಂದು ಯೋಧನನ್ನು ಬಿಡುಗಡೆಗೊಳಿಸಲಾಗಿದೆ.

- Advertisement -

Latest News

error: Content is protected !!