- Advertisement -
![]()
- Advertisement -
ಉಡುಪಿ: ಮಲ್ಪೆಯ ತೊಟ್ಟಂ ಬೀಚ್ ಬಳಿ ಆಗಸ್ಟ್ 29 ರಂದು ಸಮುದ್ರದ ಪ್ರಕ್ಷುಬ್ಧತೆಯಿಂದಾಗಿ ಮೀನುಗಾರಿಕಾ ದೋಣಿ ಮಗುಚಿ ಬಿದ್ದ ಘಟನೆ ನಡೆದಿದೆ.
ನಾಲ್ವರು ಮೀನುಗಾರರು ಸಮುದ್ರಕ್ಕೆ ಇಳಿದಿದ್ದು, ಈ ಸಂದರ್ಭದಲ್ಲಿ ದೋಣಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ತೊಟ್ಟಂ ವಾರ್ಡ್ ಪುರಸಭೆ ಸದಸ್ಯ ಯೋಗೇಶ್ ಅವರು ತಕ್ಷಣ ವೃತ್ತಿಪರ ಸಮಾಜ ಸೇವಕ ಈಶ್ವರ್ ಮಲ್ಪೆ ಮತ್ತು ಅವರ ತಂಡಕ್ಕೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಈಶ್ವರ್ ಅವರು, ಸ್ಥಳೀಯರಾದ ಪ್ರವೀಣ್ ಮತ್ತು ಉದಯ್ ಅವರೊಂದಿಗೆ ಲೈಫ್ ಜಾಕೆಟ್‌ಗಳನ್ನು ತೆಗೆದುಕೊಂಡು ಸ್ಥಳಕ್ಕೆ ಧಾವಿಸಿ, ನಾಲ್ವರು ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಹೀಗೆ ನಾಲ್ವರೂ ಕೂಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- Advertisement -


