Monday, May 6, 2024
Homeಕರಾವಳಿಮಂಗಳೂರಿನಲ್ಲಿ ಬಹಿರಂಗ ಪ್ರಚಾರ ಇಂದು ಅಂತ್ಯ

ಮಂಗಳೂರಿನಲ್ಲಿ ಬಹಿರಂಗ ಪ್ರಚಾರ ಇಂದು ಅಂತ್ಯ

spot_img
- Advertisement -
- Advertisement -

ಮಂಗಳೂರು: ಏ.24 ಬುಧವಾರದಂದು ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಸಂಜೆ 6ಕ್ಕೆ ಅಂತ್ಯಗೊಳ್ಳಲಿದೆ. ಆ ನಂತರ ಇದೇ 26ರಂದು ಮತದಾನ ಮುಗಿಯುವವರೆಗಿನ ಅವಧಿಯ ಎಲ್ಲ ಚಟುವಟಿಕೆ ಮೇಲೆ ವಿಶೇಷ ನಿಗಾ ವಹಿಸಲು ಜಿಲ್ಲಾಡಳಿತ ವಿಶೇಷ ಕ್ರಮವಹಿಸಿದೆ.

ಈ ಕುರಿತು ಮಂಗಳವಾರದಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ‘ಕೊನೆಯ 72 ಗಂಟೆಗಳಲ್ಲಿ ಚುನಾವಣಾ ಅಕ್ರಮಗಳ ಮೇಲೆ ವಿಶೇಷ ನಿಗಾ ವಹಿಸಲು 186 ಸೆಕ್ಟರ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 69 ಸ್ಥಿರ ಸರ್ವೇಕ್ಷಣಾ ತಂಡಗಳು (ಎಸ್‌ಎಸ್‌ಟಿ), 72 ಸಂಚಾರ ತಂಡ (ಎಫ್‌ಎಸ್‌ಟಿ), 24 ವಿಡಿಯೊ ತಂಡಗಳು ಕಣ್ಗಾವಲು ಇಡಲಿವೆ. ಅಷ್ಟೇಅಲ್ಲದೆ ಬುಧವಾರ ಸಂಜೆ 6ರ ಬಳಿಕ ರ‍್ಯಾಲಿ– ಬೀದಿ ಪ್ರಚಾರಕ್ಕೆ ಅವಕಾಶ ಇಲ್ಲ. ಮನೆ ಮನೆಗೆ ಹೋಗಿ ಪ್ರಚಾರ ಮಾಡಬಹುದು. ಈ ಕ್ಷೇತ್ರದ ಮತದಾರರಲ್ಲದ ರಾಜಕೀಯ ಮುಖಂಡರು ಕಡ್ಡಾಯವಾಗಿ ಕ್ಷೇತ್ರವನ್ನು ತೊರೆಯಬೇಕು. ಈ ಅವಧಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.  ಮದ್ಯ ಮಾರಾಟ ನಿಷೇಧಿಸಲಾಗಿದೆ.  ಖಾಸಗಿ ಕಾರ್ಯಕ್ರಮಗಳನ್ನು ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಮಾಡಿದರೆ ಕ್ರಮವಹಿಸಲಿದ್ದೇವೆ’ ಎಂದರು.  

ಶೇ 70ರಂದು ಸಿಬ್ಬಂದಿ ಮಹಿಳೆಯರು ಈ ಸಲ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅವರು ಉದ್ಯೋಗ ನಿರ್ವಹಿಸುವ ವಿಧಾನ ಸಭಾ ಕ್ಷೇತ್ರಗಳಲ್ಲೇ  ಚುನಾವಣಾ ಕರ್ತವ್ಯ ವಹಿಸಲಾಗಿದೆ. ಮತಗಟ್ಟೆ ಸಿಬ್ಬಂದಿ ವಾಸ್ತವ್ಯಕ್ಕೆ, ಪ್ರಥಮ ಚಿಕಿತ್ಸೆಗೆ ಹಾಗೂ ಊಟೋಪಚಾರಕ್ಕೂ ವ್ಯವಸ್ಥೆ ವ್ಯವಸ್ಥೆ ಕಲ್ಪಿಸಲು ಮತಗಟ್ಟೆ ಸಿಬ್ಬಂದಿ ಕಲ್ಯಾಣಾಧಿಕಾರಿಯನ್ನು ನಿಯೋಜಿಸಿದ್ದೇವೆ. ಮತಗಟ್ಟೆಯ 200 ಮೀ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶ ಎಂದು ಗುರುತಿಸಲಾಗುತ್ತದೆ. ಅಲ್ಲಿ ಪಕ್ಷದ ಅಥವಾ ಅಭ್ಯರ್ಥಿಯ ಯಾವುದೇ ಚಿಹ್ನೆ, ಶಾಲು ಬಳಸುವುದಕ್ಕೆ, ಮತ ಕೇಳಲು ಅವಕಾಶವಿಲ್ಲ. 

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಈ ಕ್ಷೇತ್ರದ 9900 ಮತದಾರರಿಗೆ ಚುನಾವಣಾ ಕರ್ತವ್ಯ ಪ್ರಮಾಣಪತ್ರ ವಿತರಿಸಲಾಗಿದೆ. ಅದನ್ನು ಬಳಸಿ ಅವರು ಕರ್ತವ್ಯ ನಿರ್ವಹಿಸಿದ ಮತಗಟ್ಟೆಯಲ್ಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್‌, ಪೊಲೀಸ್‌ ಕಮೀಷನರ್‌ ಅನುಪಮ್‌ ಅಗರ್ವಾಲ್‌, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್‌ ಕುಮಾರ್‌ ಭಾಗವಹಿಸಿದ್ದರು

- Advertisement -
spot_img

Latest News

error: Content is protected !!