Wednesday, June 24, 2026
Homeಕರಾವಳಿಉಡುಪಿಉಡುಪಿ: ಆನ್ಲೈನ್ ಲೋನ್ ಆಸೆಗೆ ಬಿದ್ದು 2 ಲಕ್ಷ ರೂಪಾಯಿ ಕಳೆದುಕೊಂಡ ಯುವಕ

ಉಡುಪಿ: ಆನ್ಲೈನ್ ಲೋನ್ ಆಸೆಗೆ ಬಿದ್ದು 2 ಲಕ್ಷ ರೂಪಾಯಿ ಕಳೆದುಕೊಂಡ ಯುವಕ

- Advertisement -
- Advertisement -

ಉಡುಪಿ: ಆನ್ಲೈನ್ ಲೋನ್ ಆಸೆಗೆ ಬಿದ್ದು ಯುವಕನೊಬ್ಬ 2 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಹೆಬ್ರಿಯಲ್ಲಿ ನಡೆದಿದೆ.

ಯುವಕನೊಬ್ಬನಿಗೆ ದಿನಾಂಕ: 02/01/2026 ರಂದು ಬೆಳಿಗ್ಗೆ 10.00 ಗಂಟೆಗೆ 9006819608 ನೇ ನಂಬ್ರದಿಂದ ರವಿ ಕುಮಾರ್ ಎಸ್ ಎಂಬ ವ್ಯಕ್ತಿ ಪೋನ್ ಮಾಡಿ ಬಜಾಜ್ ಪೈನಾನ್ಸ್ನಿಂದ ಮಾತನಾಡುವುದು ನಾವು ಆನ್ಲೈನ್ನಲ್ಲಿ ಲೋನ್ ಕೋಡುತ್ತೇವೆ ಎಂದು ಹೇಳಿದ್ದಾನೆ. ಯುವಕನ ತಂಗಿ ಮದುವೆ ಇದ್ದ ಕಾರಣ ಯುವಕ ಬಡ್ಡಿ ಎಷ್ಟು ಎಂದು ಕೇಳಿದಾಗ 3 ಶೇಕಡಾ ಬಡ್ಡಿ ಎಂದು ಹೇಳಿದ್ದು 5 ವರ್ಷಕ್ಕೆ ಪ್ರತಿ ತಿಂಗಳು 6289-00 ರೂ ಹಣ ಕಟ್ಟಲಿಕ್ಕೆ ಬರುತ್ತದೆ ಎಂಬುದಾಗಿ ನಂಬಿಸಿದ್ದಾನೆ.

ಬಳಿಕ ಬೇರೆ ಬೇರೆ ಕಾರಣ ಹೇಳಿ ದಿನಾಂಕ: 02/01/2026 ರಿಂದ 05/01/2026 ರವರೆಗೆ ಹಂತ ಹಂತವಾಗಿ ಒಟ್ಟು 36 ಟ್ರಾಜೆಂಕ್ಷನ್ ಮೂಲಕ ಒಟ್ಟು 2,19,500-00 ರೂ ಹಣವನ್ನು ಹಾಕಿಸಿಕೊಂಡಿರುತ್ತಾರೆ. ಅಲ್ಲದೆ ಯಾವುದೇ ಲೋನ್ ನೀಡದೆ ಕಟ್ಟಿದ ಹಣವನ್ನು ವಾಪಾಸ್ ನೀಡದೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ:01/2026 US 318(4),319(2) BNS & 66(D) IT ACT ರಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!