- Advertisement -
- Advertisement -
ಬಂಟ್ವಾಳ: ದೂರವಾಣಿ ಕರೆ ಮಾಡಿ, ಬ್ಯಾಂಕ್ ಖಾತೆ ಕುರಿತು ವಿಚಾರಿಸಿ ಒಟಿಪಿ ಸಂಖ್ಯೆ ಕೇಳಿ ಮೋಸ ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.ಪ್ರಧಾನಿ ಮೋದಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ಹಣ ಹಾಕಿದ ಬಗ್ಗೆ ನಿಮಗೆ ಒಂದು ಮೆಸೇಜ್ ಬರುತ್ತೆ. ಅದರಲ್ಲಿ ಒಟಿಪಿ ಸಂಖ್ಯೆ ಇದೆ. ಅದನ್ನು ನಮಗೆ ನೀಡಿ ಎಂದು ಕರೆ ಮಾಡಿದ್ದಾರೆ. ಈ ಖದೀಮರ ಮಾತು ನಂಬಿ ಒಟಿಪಿ ಸಂಖ್ಯೆ ನೀಡಿದ ವ್ಯಕ್ತಿಯೊಬ್ಬರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ.
ಹೀಗೆಯೇ ಇನ್ನೂ ಹಲವರಿಗೆ ಕರೆಗಳು ಬಂದಿದ್ದು, ಒಟಿಪಿ ಸಂಖ್ಯೆ ನೀಡದಿರುವುದರಿಂದ ಈ ಮೋಸದ ಜಾಲದಿಂದ ಪಾರಾಗಿದ್ದಾರೆ.ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
- Advertisement -