Wednesday, June 3, 2026
Homeತಾಜಾ ಸುದ್ದಿತಾಯಿ, ಮಗುವನ್ನು ಉಳಿಸಿತು ಆ ಒಂದು ವಿಡಿಯೋ ಕಾಲ್...

ತಾಯಿ, ಮಗುವನ್ನು ಉಳಿಸಿತು ಆ ಒಂದು ವಿಡಿಯೋ ಕಾಲ್…

- Advertisement -
- Advertisement -

ಬೆಂಗಳೂರು : ಲಾಕ್‌ಡೌನ್ ದಿನವೇ ಮನಮಿಡಿಯುವ ಘಟನೆಯೊಂದು ನಡೆದಿದೆ. ಕೊಂಚ ಏರುಪೇರಾಗಿದ್ದರೂ ಎರಡು ಜೀವಗಳಿಗೆ ಕಂಟಕ ಎದುರಾಗುತ್ತಿತ್ತು. ವಿಡಿಯೋ ಕಾಲ್ ಮೂಲಕ ವೈದ್ಯೆಯೊಬ್ಬರು ಹೆರಿಗೆ ಮಾಡಿಸಿ ತಾಯಿ ಮಗುವಿನ ಪ್ರಾಣ ಉಳಿಸಿದ್ದಾರೆ.

ವಾಸವಿ ಫತ್ತೇಪೂರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅಕ್ಕಪಕ್ಕದ ಮಹಿಳೆಯರು ಪರದಾಡುತ್ತಿದ್ದರು. ಬಳಿಕ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ವೈದ್ಯೆ ಪ್ರಿಯಾಂಕಗೆ ಕರೆ ಮಾಡಿ ಸಹಾಯ ಯಾಚಿಸಿದ್ದಾರೆ. ಆಸ್ಪತ್ರೆ ವೈದ್ಯೆ ಡಾ. ಪ್ರಿಯಾಂಕ ಅವರು ಮಹಿಳೆಯರಿಗೆ ಸ್ಪಂದಿಸಿದ್ದು, ಹೆರಿಗೆ ಮಾಡಿಸುವ ಮಾಹಿತಿಯನ್ನು ಅಲ್ಲಿರುವ ಮಹಿಳೆಯರಿಗೆ ನೀಡಿದ್ದು, ಸೂಸೂತ್ರ ಹೆರಿಯಾಗಲು ನೆರವಾಗಿದ್ದಾರೆ. ವೈದ್ಯೆ ಪ್ರಿಯಾಂಕರ ಸಹಕಾರ ಹಾಗು ಸ್ಥಳೀಯ ಮಹಿಳೆಯರ ಸಹಕಾರದಿಂದ ಎರಡೂ ಜೀವಗಳು ಉಳಿದಿವೆ. 

 

- Advertisement -

Latest News

error: Content is protected !!