Saturday, June 6, 2026
Homeಕರಾವಳಿಸುಳ್ಯ: ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿ ವಾಪಸ್ಸು ಬರುತ್ತಿರುವಾಗ ಅಪಘಾತಕ್ಕೆ ಸಿಲುಕಿ ಒಂದು ತಿಂಗಳ ಮಗು ಸಾವು...

ಸುಳ್ಯ: ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿ ವಾಪಸ್ಸು ಬರುತ್ತಿರುವಾಗ ಅಪಘಾತಕ್ಕೆ ಸಿಲುಕಿ ಒಂದು ತಿಂಗಳ ಮಗು ಸಾವು !

- Advertisement -
- Advertisement -

ಸುಳ್ಯದ ಬೇಂಗಮಲೆ ಎಂಬಲ್ಲಿ ತಡ ರಾತ್ರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿ ವಾಪಸ್ಸು ಕರೆದುಕೊಂಡು ಬರುತ್ತಿರುವಾಗ ಅಪಘಾತಕ್ಕೆ ಸಿಲುಕಿ ಒಂದು ತಿಂಗಳ ಮಗು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಹಸುಳೆ ಸುಳ್ಯ ತಾಲೂಕಿನ ಕಲ್ಮಡ್ಕ ಪರಿಸರದ ಮಗು . ಈ ಮಗು ಪ್ರಯಾಣಿಸುತ್ತಿದ್ದ ಆಟೋ, ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಕಲ್ಮಡ್ಕದ ಮಗುವಿಗೆ ಸಂಜೆ ಅನಾರೋಗ್ಯ ಕಾಣಿಸಿಕೊಂಡಿತ್ತು, ಚಿಕಿತ್ಸೆಗಾಗಿ ಆಟೋದಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಕೊಡಿಸಿದ ಬಳಿಕ ಆದೇ ರಿಕ್ಷಾದಲ್ಲಿ ಮರಳಿ ಮನೆಗೆ ಹೊರಟಿದ್ದಾರೆ.

ಬೇಂಗಮಲೆ ಎಂಬಲ್ಲಿ ತಲುಪುವ ವೇಳೆ ಆಟೋ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಗು ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದೆ.

- Advertisement -

Latest News

error: Content is protected !!