- Advertisement -
- Advertisement -
ಕಡಬ : ರೈಲು ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರೈಲು ತಾಗಿ ವ್ಯಕ್ತಿಗೆ ಗಾಯವಾಗಿರುವ ಘಟನೆ ಕಡಬ ತಾಲೂಕಿನ ಎಡಮಂಗಲ ನಿಲ್ದಾಣದ ಬಳಿ ನಡೆದಿದೆ.
ಎಡಮಂಗಲ ಗ್ರಾಮದ ದೇರಳ ಮನೆಯ ಪದ್ಮಯ್ಯ (70) ಗಾಯಗೊಂಡವರು.
ಪದ್ಮಯ್ಯ ಅವರು ರೈಲು ಮಾರ್ಗದ ಬದಿ ಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂಭಾಗದಿಂದ ರೈಲು ಬಂದದ್ದು ಅವರ ಗಮನಕ್ಕೆ ಬಂದಿಲ್ಲ.ಪರಿಣಾಮ ರೈಲು ತಾಗಿ ಆಯ ತಪ್ಪಿ ಕೆಳಗಡೆಗೆ ಚರಂಡಿಗೆ ಬಿದ್ದರು. ಅವರ ಭುಜದ ಎಲುಬಿಗೆ ಗಾಯವಾಗಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -