Wednesday, May 1, 2024
Homeತಾಜಾ ಸುದ್ದಿಹುಂಜವನ್ನು ಬಲಿ ಕೊಡಲು ಮುಂದಾದ ವ್ಯಕ್ತಿ; ಕೊನೆಗೆ ಬದುಕಿದ್ದು ಹುಂಜ ಸತ್ತಿದ್ದು ಬಲಿಕೊಡಲು ಮುಂದಾದ ವೃದ್ಧ

ಹುಂಜವನ್ನು ಬಲಿ ಕೊಡಲು ಮುಂದಾದ ವ್ಯಕ್ತಿ; ಕೊನೆಗೆ ಬದುಕಿದ್ದು ಹುಂಜ ಸತ್ತಿದ್ದು ಬಲಿಕೊಡಲು ಮುಂದಾದ ವೃದ್ಧ

spot_img
- Advertisement -
- Advertisement -

ಚೆನ್ನೈ : ಹುಂಜವನ್ನು ಬಲಿ ಕೊಡಲು ಮುಂದಾದ ವ್ಯಕ್ತಿ ಕೊನೆಗೆ ತಾನೇ ಗುಂಡಿಗೆ ಬಿದ್ದು ಸಾವನ್ನಪ್ಪಿದ ವಿಚಿತ್ರ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ.  70 ವರ್ಷದ ವ್ಯಕ್ತಿಯೊಬ್ಬರು ಹುಂಜವನ್ನು ಬಲಿಕೊಡಲು ತೆರಳುತ್ತಿದ್ದಾಗ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತನನ್ನು ರಾಜೇಂದ್ರನ್ ಎಂದು ಗುರುತಿಸಲಾಗಿದೆ. ಲಿಫ್ಟ್ ಅಳವಡಿಸಲು ಅಗೆದ 20 ಅಡಿ ಆಳದ ಗುಂಡಿಗೆ ಬಿದ್ದಿದ್ದಾರೆ.

ಮೃತ ರಾಜೇಂದ್ರನ್ ಅವರನ್ನು ಟಿ ಲೋಕೇಶ್ ಎಂಬುವವರು ಶುಕ್ರವಾರ ಗೃಹಪ್ರವೇಶ ಸಮಾರಂಭದ ಭಾಗವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಲು ನೇಮಿಸಿಕೊಂಡಿದ್ದರು.

ರಾಜೇಂದ್ರನ್ ರಕ್ತ ಬಲಿ ನೀಡಲು ಹುಂಜದೊಂದಿಗೆ ಹೊಸ ಮನೆಯ ಮೂರನೇ ಮಹಡಿಯನ್ನು ತಲುಪುತ್ತಿದ್ದಂತೆ ಆಕಸ್ಮಾತ್ ಆಗಿ ಕೆಳಗೆ ತೋಡಿದ್ದ ಗುಂಡಿಗೆ ಬಿದ್ದಿದ್ದಾರೆ. ಕೋಳಿ ಬಲಿಗೆ ಹೋದವರು ಬರಲಿಲ್ಲ ಎಂದು ಲೋಕೇಶ್ ಹುಡುಕಲು ಹೋದಾಗ ಲಿಫ್ಟ್ ಅಳವಡಿಕೆಗಾಗಿ ಅಗೆದ ಗುಂಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದರು. ಆದರೆ . ಹುಂಜವು ರಾಜೇಂದ್ರನ್ ನ ದೇಹದ ಮೇಲೆ ಯಾವುದೇ ಗಾಯಗಳಿಲ್ಲದೇ ನಿಂತಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ಅಷ್ಟರಲ್ಲಿ ರಾಜೇಂದ್ರನ್ ಮೃತಪಟ್ಟಿದ್ದರು.

- Advertisement -
spot_img

Latest News

error: Content is protected !!