Sunday, April 28, 2024
Homeಕರಾವಳಿಬಂಟ್ವಾಳ; ಚರ್ಚ್‌ನ ಪಾದ್ರಿಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣ: ದಂಪತಿಗೆ ಕ್ರೈಸ್ತ ಸಮುದಾಯದಿಂದ  ಬಹಿಷ್ಕಾರ...

ಬಂಟ್ವಾಳ; ಚರ್ಚ್‌ನ ಪಾದ್ರಿಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣ: ದಂಪತಿಗೆ ಕ್ರೈಸ್ತ ಸಮುದಾಯದಿಂದ  ಬಹಿಷ್ಕಾರ ಆರೋಪ

spot_img
- Advertisement -
- Advertisement -

ಬಂಟ್ವಾಳ; ಚರ್ಚ್‌ನ ಪಾದ್ರಿಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೃದ್ಧ ದಂಪತಿಗೆ ಕ್ರೈಸ್ತ ಸಮುದಾಯ ಬಹಿಷ್ಕಾರ ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ..

ಈ ಬಗ್ಗೆ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವೃದ್ದ ದಂಪತಿ ಗ್ರೆಗೊರಿ ಮೊಂಥೆರೊ ಮತ್ತು ಫಿಲೋಮಿನಾ ಕೊಯೆಲೊ ಚರ್ಚ್ ಪಾದ್ರಿ ಫಾದರ್ ನೆಲ್ಸನ್ ಒಲಿವೆರಾ ವಿರುದ್ಧ ದೂರು ನೀಡಿದ ಕೂಡಲೇ ಕಿರುಕುಳ ಆರಂಭವಾಗಿದೆ. ಮೊದಲಿಗೆ ಚರ್ಚ್‌ಗೆ ಸಂಪರ್ಕ ಹೊಂದಿದ ಎಲ್ಲ ವಾಟ್ಸಾಪ್ ಗುಂಪುಗಳಿಂದ ನಮ್ಮನ್ನು ತೆಗೆದುಹಾಕಲಾಯಿತು. ನಂತರ ನಮ್ಮ ಸುತ್ತಮುತ್ತಲಿನ ನಮ್ಮ ಸಮುದಾಯದ ಜನರು ಇದ್ದಕ್ಕಿದ್ದಂತೆ ನಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ಪ್ರಕರಣವನ್ನು ದುರ್ಬಲಗೊಳಿಸಲು ಮಂಗಳೂರು ಧರ್ಮಪ್ರಾಂತ್ಯ ಪೊಲೀಸರ ಮೇಲೆ ಒತ್ತಡ ಹೇರುವ ಮೂಲಕ ಆರೋಪಿ ಪಾದ್ರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.


ಪಾದ್ರಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ದಂಪತಿಗೆ ಸಹಾಯ ಮಾಡಿದ ಸಾಮಾಜಿಕ ಕಾರ್ಯಕರ್ತರಾದ ರಾಬರ್ಟ್ ರೊಸಾರಿಯೊ ಮತ್ತು ಮಾರಿಸ್ ಮಸ್ಕರೇನ್ಹಸ್ ಅವರನ್ನೂ ಟಾರ್ಗೆಟ್ ಮಾಡಿಕೊಳ್ಳಲಾಗಿದೆ. ಮಂಗಳೂರಿನಾದ್ಯಂತ ನಮ್ಮನ್ನು ಕ್ರೈಸ್ತ ವಿರೋಧಿಗಳೆಂದು ಬಿಂಬಿಸಿ ನಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಲು ಪ್ರಚೋದನೆ ನೀಡಲಾಗುತ್ತಿದೆ. ಆದರೆ ಸಮುದಾಯದ ಜನರಲ್ಲಿ ಜಾಗೃತಿ ಹೆಚ್ಚಿರುವುದರಿಂದ ಈವರೆಗೆ ಯಾವುದೇ ಕ್ರೈಸ್ತರು ಒತ್ತಡಕ್ಕೆ ಮಣಿದಿಲ್ಲ ಎಂದು ಗ್ರೆಗೊರಿ ಮೊಂತೆರೊ ಮತ್ತು ಫಿಲೋಮಿನಾ ಕೊಯೆಲೊ ಹೇಳಿದ್ದಾರೆ.


ದಂಪತಿಗೆ ಸಹಾಯ ಮಾಡಿದ್ದಕ್ಕಾಗಿ ಪುತ್ತೂರು ಚರ್ಚ್‌ನ ಪ್ಯಾರಿಷ್ ಕೌನ್ಸಿಲ್‌ನಿಂದ ನನ್ನನ್ನು ತೆಗೆದುಹಾಕಲಾಗಿದೆ ಎಂದು ಮಾರಿಸ್ ಮಸ್ಕರೇನ್ಹಸ್ ತಿಳಿಸಿದ್ದಾರೆ. ಬಿಷಪ್ ರೆ. ಪೀಟರ್ ಪಾಲ್ ಸಲ್ಡಾನ್ಹಾ ಅವರಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ ಅವರು, ಬಿಷಪ್ ಅವರು ಪ್ಯಾರಿಷ್ ಪಾದ್ರಿ ಫಾದರ್ ನೆಲ್ಸನ್ ಒಲಿವೆರಾ ಜೊತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದರು. ಮಂಗಳೂರು ಧರ್ಮಾಲಯಗಳು ಸಂಕಷ್ಟದಲ್ಲಿರುವ ವೃದ್ಧ ದಂಪತಿಗೆ ನೆರವು ನೀಡದಿರುವುದನ್ನು ರೊಸಾರಿಯೋ ಖಂಡಿಸಿದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆ ಸಾರ್ವಜನಿಕರಿಂದ ತೀವ್ರ ಟೀಕೆಗೆ ಕಾರಣವಾಯಿತು. ಆದರೆ ಸಂತ್ರಸ್ತರನ್ನು ಭೇಟಿ ಮಾಡಲು ಬಿಷಪ್ ತಲೆಕೆಡಿಸಿಕೊಂಡಿಲ್ಲ, ಅವರಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಯಾರನ್ನೂ ಕಳುಹಿಸಲಿಲ್ಲ. ಘಟನೆಗೆ ಸಂಬಂಧಿಸಿದಂತೆ ನನ್ನ ಪತ್ರಕ್ಕೂ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಮಾರಿಸ್ ಮಸ್ಕರೇನ್ಹಸ್ ಆರೋಪಿಸಿದ್ದಾರೆ.

- Advertisement -
spot_img

Latest News

error: Content is protected !!