- Advertisement -
![]()
- Advertisement -
ಬಳ್ಳಾರಿ;ಪತಿ ಪತ್ನಿ ಸಾವಿನಲ್ಲೂ ಕೂಡ ಜೊತೆಯಾದ ಅಪರೂಪ ಘಟನೆ ಬಳ್ಳಾರಿ ಜಿಲ್ಲೆಯಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಸಮೀಪದ ಕಂಚೋಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೃದ್ಧ ದಂಪತಿಗಳು ಇಂದು ಸಾವನ್ನಪಿದ್ದು, ಮೃತರ ಅಂತ್ಯಕ್ರಿಯೆಯನ್ನು ಒಂದೆಡೆ ನೆರವೇರಿಸಲಾಗಿದೆ.ಹೊಸಮನಿ ಲಕ್ಷ್ಮೀದೇವಿ(70) ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಅವರ ಪತಿ ಹೊಸಮನಿ ಮಹಾದೇವಪ್ಪ(75) ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.
ಮೃತ ದಂಪತಿಗೆ ಓರ್ವ ಪುತ್ರನಿದ್ದು, ಅಪಾರ ಸಂಖ್ಯೆಯ ಬಂಧುವರ್ಗ, ಸ್ನೇಹಿತರು ಮತ್ತು ಕುಟುಂಬದ ಆಪ್ತರನ್ನು ಅಗಲಿದ್ದಾರೆ.
- Advertisement -


