Wednesday, June 26, 2024
Homeಕರಾವಳಿರಾಜ್ಯಮಟ್ಟದ ಎನ್ ಎಸ್ ಎಸ್ ಪ್ರಶಸ್ತಿ ಪ್ರದಾನ: ಕರಾವಳಿಯ ಐವರಿಗೆ ಪ್ರಶಸ್ತಿ

ರಾಜ್ಯಮಟ್ಟದ ಎನ್ ಎಸ್ ಎಸ್ ಪ್ರಶಸ್ತಿ ಪ್ರದಾನ: ಕರಾವಳಿಯ ಐವರಿಗೆ ಪ್ರಶಸ್ತಿ

spot_img
- Advertisement -
- Advertisement -

ಬೆಂಗಳೂರು: 2020-21 ನೇ ಸಾಲಿನ ಎನ್ ಎಸ್ ಎಸ್ ರಾಜ್ಯ ಪ್ರಶಸ್ತಿಗಳನ್ನು ಬೆಂಗಳೂರಿನಲ್ಲಿ ಇಂದು ಪ್ರದಾನ ಮಾಡಲಾಗಿದೆ.ಪುರುಷರ ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ಮಂಗಳೂರಿನ ನಂತೂರಿನ ಪಾದುವ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೆಜ್‌ಮೆಂಟ್‌ ನ ಪ್ರೊ. ರೋಶನ್ ವಿನ್ನಿ ಸಾಂತುಮಾಯರ್ ಮತ್ತು ದೇರಳಕಟ್ಟೆಯ ಯೇನಪೋಯ ದಂತ ಕಾಲೇಜಿನ ಡಾ. ಇಮ್ರಾನ್ ಪಾಷಾ ಸ್ವೀಕರಿಸಿದರು.

ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ಮೊಂಡಂಕಾಪು ಕಾರ್ಮೆಲ್ ಕಾಲೇಜಿನ ಮಧುರ ಕೆ. ಅವರಿಗೆ ಪ್ರದಾನ ಮಾಡಲಾಗಿದೆ.

ಬಾಲಕರ ವಿಭಾಗದಲ್ಲಿ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿಗೆ ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರದೀಪ ಮತ್ತು ಬಾಲಕಿಯರ ವಿಭಾಗದಲ್ಲಿ ಅತ್ಯುತ್ತಮ ಸ್ವಯಂಸೇವಕಿ ಪ್ರಶಸ್ತಿಗೆ ಸುರತ್ಕಲ್ ಗೋವಿಂದ ದಾಸ್ ಕಾಲೇಜಿನ ರಶ್ಮಿ ಜೆ. ಅಂಚನ್ ಅವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಿದರು.

ರಾಜ್ಯಮಟ್ಟದ ಪ್ರಶಸ್ತಿಗೆ 2 ವಿಶ್ವವಿದ್ಯಾಲಯ, 12 ಅತ್ಯುತ್ತಮ ಘಟಕ ಹಾಗೂ ಕಾರ್ಯಕ್ರಮ ಸಂಯೋಜನಾಧಿಕಾರಿಗಳು ಮತ್ತು12 ಸ್ವಯಂಸೇವಕರನ್ನು ಆಯ್ಕೆ ಮಾಡಲಾಗಿತ್ತು.

- Advertisement -
spot_img

Latest News

error: Content is protected !!