Saturday, April 20, 2024
Homeತಾಜಾ ಸುದ್ದಿಮುಂಬೈ ,ಪುಣೆ ಮಹಾನಗರಗಳಿಗೆ ಶಾಕ್ ನೀಡಿದ ಮಹಾ ಸಿಎಂ

ಮುಂಬೈ ,ಪುಣೆ ಮಹಾನಗರಗಳಿಗೆ ಶಾಕ್ ನೀಡಿದ ಮಹಾ ಸಿಎಂ

spot_img
- Advertisement -
- Advertisement -

ಮುಂಬೈ : ಮೇ.1 ಶುಕ್ರವಾರ ಮಹಾರಾಷ್ಟ್ರದ ಸಂಸ್ಥಾಪನಾ ದಿನದ ಅಂಗವಾಗಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು , ರಾಜ್ಯದಲ್ಲಿ ಆರ್ಥಿಕ ಸುಧಾರಣಾ ದೃಷ್ಟಿಯಿಂದ ಕೈಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತದೆ. ಆದರೆ, ಮುಂಬೈ, ಪುಣೆ ಹಾಗೂ ನಾಗ್ಪುರ್ ನಲ್ಲಿ ಯಾವುದಕ್ಕೂ ಅನುಮತಿಸುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
ಮೇ.3 ರಂದು ರಾಜ್ಯದಲ್ಲಿ ಕೋವಿಡ್ 19 ಲಾಕ್ ಡೌನ್ ತೆರವಾಗಬಹುದು ಎಂದು ಕಾಯ್ದು ಕುಳಿತಿದ್ದ ಮಹಾರಾಷ್ಟ್ರದ ಎರಡು ಮಹಾನಗರಗಳಾದ ಮುಂಬೈ ಹಾಗೂ ಪುಣೆ ಜನರಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಘಾತಕಾರಿ ಸುದ್ದಿ ನೀಡಿದ್ದಾರೆ.ಮುಂಬೈ ಹಾಗೂ ಪುಣೆಯಲ್ಲಿ ಯಾವುದೇ ಕಾರಣಕ್ಕೂ ಲಾಕ್‌ಡೌನ್ ತೆರವು ಮಾಡುವುದಿಲ್ಲ ಎಂದಿದ್ದಾರೆ. ಇನ್ನೂ ಕನಿಷ್ಠ ಒಂದು ತಿಂಗಳಾದರೂ ಈ ನಗರದಲ್ಲಿ ಲಾಕ್‌ಡೌನ್ ಇರಲಿದೆ ಎಂದು ಅವರು ಹೇಳಿದ್ದಾರೆ. ಉಳಿದಂತೆ ಮಹಾರಾಷ್ಟ್ರದ ಕಿತ್ತಳೆ, ಹಳದಿ ಹಾಗೂ ಹಸಿರು ವಲಯಗಳಲ್ಲಿ ಲಾಕ್‌ಡೌನ್ ನಿಂದ ಕೆಲವು ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಇಡೀ ಭಾರತದಲ್ಲಿ ಕೊರೊನಾ ಸೋಂಕು ಹಾವಳಿ ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಸದ್ದು ಮಾಡುತ್ತಿದೆ. 10 ಸಾವಿರಕ್ಕೂ ಹೆಚ್ಚು ಕೊರೊನಾ ರೋಗಿಗಳು ಅಲ್ಲಿ ಕಂಡು ಬಂದಿದ್ದಾರೆ. 432 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಮುಂಬೈನಲ್ಲಿ 7000 ಜನರಿಗೆ ಸೋಂಕು ತಗುಲಿದೆ. ಪುಣೆಯಲ್ಲಿ 1338 ಜನರಿಗೆ ಸೋಂಕು ತಗುಲಿ ಈ ಎರಡು ನಗರಗಳು ಕೊರೊನಾ ವಿಷಯದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಸದ್ಯಕ್ಕೆ ಈ ಎರಡು ನಗರಗಳಿಗೆ ಲಾಕ್‌ಡೌನ್ ಮಾತ್ರ ಮರಿಚಿಕೆಯೇ ಸರಿ.

- Advertisement -
spot_img

Latest News

error: Content is protected !!