Wednesday, June 3, 2026
Homeಕರಾವಳಿಉಡುಪಿಕರಾವಳಿಯ ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮೇ.12 ರಂದು ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಿಗಲ್ಲ...

ಕರಾವಳಿಯ ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮೇ.12 ರಂದು ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಿಗಲ್ಲ ಹಾಟ್ ಡ್ರಿಂಕ್ಸ್

- Advertisement -
- Advertisement -

ಮಂಗಳೂರು: ರಾಜ್ಯಾದ್ಯಂತ ಹದಿನೈದು ದಿನಗಳ ಕಾಲ ಮದ್ಯ ವ್ಯಾಪಾರಿಗಳ ಮುಷ್ಕರ ನಡೆಯಲಿದೆ. ಇಂದಿನಿಂದ ಮೇ ತಿಂಗಳ 19ರವರೆಗೆ ನಿರಂತರ ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಈಗಾಗಲೇ ತಿಳಿಸಿದ್ದಾರೆ.


ಕೆಎಸ್ ಪಿಸಿಎಲ್ ಎಂಡಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ, ಅಬಕಾರಿ ಸಚಿವರು, ಮುಖ್ಯಮಂತ್ರಿಗಳು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿ ರಾಜ್ಯ ಮದ್ಯ ಮಾರಾಟಗಾರರ ಸಂಘದ ಮದ್ಯ ಖರೀದಿಯನ್ನು ನಿಲ್ಲಿಸಿದೆ. ಇದೇ ಮುಷ್ಕರದ ಹಿನ್ನೆಲೆ ಮೇ.12 ರಂದು ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮದ್ಯ ಮಾರಾಟವಿರವುದಿಲ್ಲ. ಇನ್ನೂ ಪಕ್ಕದ ಜಿಲ್ಲೆಗಳಿಂದ ಖರೀದಿ ಮಾಡೋಣ ಎಂದ್ರೆ ಮೈಸೂರು, ಕೊಡಗು, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಈ ಜಿಲ್ಲೆಗಳಲ್ಲೂ ಮೇ.12 ರಂದು ಮದ್ಯ ಮಾರಾಟವಿರುವುದಿಲ್ಲ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ತಿಳಿಸಿದ್ದಾರೆ.

- Advertisement -

Latest News

error: Content is protected !!