Thursday, June 4, 2026
Homeಕರಾವಳಿಮಂಗಳೂರಿನ ಯುವ ಉದ್ಯಮಿ ನಿತಿನ್ ಸುವರ್ಣ ಆತ್ಮಹತ್ಯೆ

ಮಂಗಳೂರಿನ ಯುವ ಉದ್ಯಮಿ ನಿತಿನ್ ಸುವರ್ಣ ಆತ್ಮಹತ್ಯೆ

- Advertisement -
- Advertisement -

ಮಂಗಳೂರು: ಇಲ್ಲಿನ ಯುವ ಉದ್ಯಮಿ ನಿತಿನ್ ಸುವರ್ಣ ಅವರು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಿತಿನ್ ಅವರು ಹಲವು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.

ಹೋಟೆಲ್ ಹಾಗೂ ಇನ್ನಿತರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ನಿತಿನ್ ಸುವರ್ಣ ಅವರು ಬಿಜೆಪಿ ಹಾಗೂ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಮೂಲತಃ ಮರೋಳಿ ನಿವಾಸಿಯಾದ ನಿತಿನ್ ಅವರು ಮಣ್ಣಗುಡ್ಡ ಬಳಿಯ ಗುಂಡೂರಾವ್ ಲೇನ್ ಬಳಿ ಫ್ಲಾಟ್ ನಲ್ಲಿ ತಾಯಿ ಜೊತೆ ನೆಲೆಸಿದ್ದರು.

ಘಟನಾ ಸ್ಥಳಕ್ಕೆ ಬರ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!