Friday, April 19, 2024
Homeತಾಜಾ ಸುದ್ದಿಲಾಕ್‍ಡೌನ್ ವೇಳೆ 6 ತಿಂಗಳಲ್ಲಿ 42 ಲೀಟರ್​ ಎದೆಹಾಲು ದಾನ ಮಾಡಿದ ಸಿನಿಮಾ ನಿರ್ಮಾಪಕಿ

ಲಾಕ್‍ಡೌನ್ ವೇಳೆ 6 ತಿಂಗಳಲ್ಲಿ 42 ಲೀಟರ್​ ಎದೆಹಾಲು ದಾನ ಮಾಡಿದ ಸಿನಿಮಾ ನಿರ್ಮಾಪಕಿ

spot_img
- Advertisement -
- Advertisement -

ಮುಂಬೈ: ತಾಪ್ಸಿ ಪನ್ನು ಹಾಗೂ ಭೂಮಿ ಪೆಡ್ನೆಕರ್ ಅಭಿನಯದ ‘ಸಾಂಡ್ ಕೀ ಆಂಖ್’ ಎಂಬ ಬಾಲಿವುಡ್ ಸಿನಿಮಾದ ನಿರ್ಮಾಪಕಿ ನಿಧಿ ಪಾರ್ಮಾರ್​ ಹೀರಾನಂದಾನಿ 42 ಲೀಟರ್ ಎದೆಹಾಲು ದಾನ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಇದೇ ವರ್ಷ ಮುದ್ದಾದ ಮಗುವಿಗೆ ಜನ್ಮ ನೀಡಿದ್ದ ನಿಧಿ ತಮ್ಮ ಶಿಶುವಿಗೆ ಮೊಲೆಯುಣಿಸುವುದಲ್ಲದೆ ಇತರೆ ನವಜಾತ ಶಿಶುವಿನ ಸಹಾಯ ಮಾಡುವ ದೃಷ್ಟಿಯಿಂದ ಕಳೆದ ಮೇ ತಿಂಗಳಿಂದ ಸರಿಸುಮಾರು 42 ಲೀಟರ್​ ಎದೆಹಾಲನ್ನು ದಾನ ಮಾಡಿದ್ದಾರೆ. ಈ ಮೂಲಕ ಎದೆಹಾಲು ಉಣಿಸಲು ಕಷ್ಟವಾಗುತ್ತಿರುವ ಬಾಣಂತಿಯರ ಮಕ್ಕಳಿಗೆ ಆಪದ್ಬಾಂಧವರಾಗಿದ್ದಾರೆ.

ಈ ಸಂಬಂಧ ಮಾತನಾಡಿರುವ ನಿಧಿ, ನನ್ನ ಮಗುವಿಗೆ ಎದೆಹಾಲು ಉಣಿಸಿದ ಬಳಿಕ ಸಾಕಷ್ಟು ಹಾಲು ಉಳಿದಿರುವುದನ್ನು ಅರಿತುಕೊಂಡೆ. ಅಲ್ಲದೆ ಫ್ರಿಡ್ಜ್ ನಲ್ಲಿ ಹಾಲನ್ನು ಶೇಖರಿಸಿಟ್ಟರೆ ಮೂರರಿಂದ ನಾಲ್ಕು ತಿಂಗಳ ಕಾಲ ಕೆಡುವುದಿಲ್ಲ ಎಂಬುದನ್ನು ನಾನು ಎಲ್ಲೋ ಓದಿದ ನೆನಪಿತ್ತು. ಹೀಗಾಗಿ ನನ್ನ ಮಗನಿಗೆ ಒಂದೂವರೆ ತಿಂಗಳು ಕಳೆದ ಬಳಿಕ ನಾನು ಹಾಲನ್ನು ಶೇಖರಿಸಿಡಲು ಆರಂಭಿಸಿದ್ದು, ಅದನ್ನು ದಾನ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದರು.

- Advertisement -
spot_img

Latest News

error: Content is protected !!