Sunday, June 29, 2025
Homeಕರಾವಳಿಬೆಳ್ತಂಗಡಿ : ಎನ್.ಐ.ಎ ದಾಳಿ ವೇಳೆ ನಾಪತ್ತೆಯಾಗಿದ್ದ ನೌಷದ್ ಪತ್ನಿ, ತಂಗಿ, ತಾಯಿ; ಎನ್.ಐ.ಎ ಕಾರ್ಯಾಚರಣೆಯಲ್ಲಿ...

ಬೆಳ್ತಂಗಡಿ : ಎನ್.ಐ.ಎ ದಾಳಿ ವೇಳೆ ನಾಪತ್ತೆಯಾಗಿದ್ದ ನೌಷದ್ ಪತ್ನಿ, ತಂಗಿ, ತಾಯಿ; ಎನ್.ಐ.ಎ ಕಾರ್ಯಾಚರಣೆಯಲ್ಲಿ ಇಬ್ಬರು ವಶಕ್ಕೆ

spot_img
- Advertisement -
- Advertisement -

ಬೆಳ್ತಂಗಡಿ : ಬೆಳ್ಳಾರೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ನೌಷದ್ (27) ಗಾಗಿ ಎರಡನೇ ಬಾರಿ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ನೌಷದ್ ಪತ್ನಿ, ತಂಗಿ, ತಾಯಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದರು. ಬಳಿಕ ತಂಗಿ, ತಾಯಿ ವಶಕ್ಕೆ ಪಡೆದುಕೊಂಡು ಮನೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಕಾಲೋನಿಯಲ್ಲಿರುವ ನೌಷದ್ ಮನೆಗೆ ಡಿ.5 ರಂದು ಬೆಳಗ್ಗೆ 5:30 ಗಂಟೆಗೆ ಬೆಂಗಳೂರಿನಿಂದ ಬಂದ ಎನ್‌.ಐ.ಎ ಅಧಿಕಾರಿಗಳು ತಂಡ ದಾಳಿ ಮಾಡಿತ್ತು. ಈ ದಾಳಿ ವೇಳೆ ಮನೆಗೆ ಬೀಗ ಹಾಕಿ ನೌಷದ್ ತಂಗಿ ತಸ್ರಿಫಾ  ಮತ್ತು ತಾಯಿ ತುಲೈಕಾ ಪರಾರಿಯಾಗಿದ್ದರು.

ಸತತ ಐದು ಗಂಟೆಗಳ ಬಳಿಕ ಎನ್.ಐ.ಎ ಅಧಿಕಾರಿಗಳು ತಂಗಿ ಮತ್ತು ತಾಯಿಯನ್ನು 12 ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ಮನೆಯೊಂದರಲ್ಲಿರುವ ಬಗ್ಗೆ ಮಾಹಿತಿ ಆಧಾರಿಸಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡು ಇನೋವಾ ಕಾರಿನಲ್ಲಿ ನೌಷದ್ ಪೊಯ್ಯಗುಡ್ಡೆ ಮನೆಗೆ ಕರೆತಂದು ಬೀಗ ತೆರೆಸಿ ಮನೆಯೊಳಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ನೌಷದ್ ಪತ್ನಿ ಸೈನಾಝ್ ಪರಾರಿಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!