Thursday, June 25, 2026
Homeತಾಜಾ ಸುದ್ದಿಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಗೆ ದಾಳಿ ನಡೆಸಿದ ಎನ್‌ಐಎ...

ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಗೆ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು- ದೀಪ್ತಿ ಮರಿಯಂಳ ವಿಚಾರಣೆ

- Advertisement -
- Advertisement -

ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರ, ಬಿ.ಎಂ. ಬಾಷಾ ಮನೆಗೆ ಎನ್‌ಐಎ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ. ಎಸ್ಪಿ ನೇತೃತ್ವದ ಅಧಿಕಾರಿಗಳ ತಂಡವು ಮನೆಯಲ್ಲಿ ಬಾಷಾ ಅವರ ಸೊಸೆ ದೀಪ್ತಿ ಅಲಿಯಾಸ್ ಮರಿಯಂ ಳನ್ನು ವಿಚಾರಣೆ ನಡೆಸುತ್ತಿದ್ದಾರೆ.

ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ. ಬಾಷಾ ಅವರ ಮನೆಗೆ ಕಳೆದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ, ಬಾಷಾ ಅವರ ಕಿರಿಯ ಪುತ್ರ ಅಮರ್ ಅಬ್ದುಲ್ ರೆಹಮಾನ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದರು. ಆ ಸಂದರ್ಭದಲ್ಲಿ ಬಾಷಾ ಅವರ ಇನ್ನೊಬ್ಬ ಪುತ್ರ ಅನಾಸ್ ಮದುವೆಯಾಗಿದ್ದ ದೀಪ್ತಿ ಮರಿಯಂ ಎಂಬವಳ ಬಗೆಗೂ ಸಂಶಯ ಕಂಡುಬಂದಿತ್ತು.

ಮರಿಯಂಳನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿ, ಕೊನೆಗೆ ಬಂಧನ ಮಾಡದೆ ತೆರಳಿದ್ದರು. ಆದರೆ ದೂರದಲ್ಲಿದ್ದುಕೊಂಡೇ ಆಕೆಯ ಬಗ್ಗೆ ನಿಗಾ ಇಟ್ಟಿದ್ದರು ಎನ್ನಲಾಗಿದೆ. ಇದೀಗ ಮತ್ತೆ ಅದೇ ಮನೆಗೆ ಎನ್‌ಐಎ ತಂಡ ಆಗಮಿಸಿದ್ದು ದೀಪ್ತಿ ಮರಿಯಂಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಬಾರಿ ಆಕೆಯನ್ನು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮೂಲತಃ ಕೊಡಗು ಮೂಲದ ದೀಪ್ತಿ ಹತ್ತು ವರ್ಷಗಳ ಹಿಂದೆ ದೇರಳಕಟ್ಟೆಯಲ್ಲಿ ಬಿಡಿಎಸ್ ಕಲಿಯುತ್ತಿದ್ದಾಗ ಬಿಎಂ ಬಾಷಾ ಪುತ್ರ ಅನಾಸ್ ಪರಿಚಯವಾಗಿ ಮದುವೆಯಾಗಿದ್ದಳು. ಆನಂತರ ಮುಸ್ಲಿಂ ಆಗಿ ಪರಿವರ್ತನೆಯಾಗಿದ್ದ ದೀಪ್ತಿ ತನ್ನ ಹೆಸರನ್ನು ಮರಿಯಂ ಎಂದು ಬದಲಿಸಿಕೊಂಡಿದ್ದಳು. ಅಲ್ಲದೆ, ಉಗ್ರವಾದಿ ಗುಂಪು ಐಸಿಸ್ ಸಂಪರ್ಕ ಪಡೆದಿದ್ದು ಮಂಗಳೂರಿನಲ್ಲಿದ್ದೇ ಜಮ್ಮು ಕಾಶ್ಮೀರದ ಲಿಂಕ್ ಹೊಂದಿದ್ದಳು ಎನ್ನಲಾಗಿತ್ತು. ಐಸಿಸ್ ನೆಟ್ವರ್ಕ್ ಗೆ ಯುವಕರನ್ನು ಸೇರಿಸುವ ಜಾಲದಲ್ಲಿ ಈಕೆಯೂ ಇದ್ದಾಳೆ ಎನ್ನುವ ಶಂಕೆಯಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸಿದ್ದರು.

- Advertisement -

Latest News

error: Content is protected !!