Friday, July 17, 2026
Homeತಾಜಾ ಸುದ್ದಿಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಹೊಸ ಮಾರ್ಗಸೂಚಿ; ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡುವಾಗ ಟ್ರಾಫಿಕ್ ಸಿಗ್ನಲ್ ಜಂಪ್...

ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಹೊಸ ಮಾರ್ಗಸೂಚಿ; ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡುವಾಗ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದರೆ ದಂಡವಿಲ್ಲ

- Advertisement -
- Advertisement -

ಬೆಂಗಳೂರು; ನಗರದ ಟ್ರಾಫಿಕ್ ಪೊಲೀಸರು ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡಲು ವಾಹನಗಳು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ ಹೊರಡಿಸಿದ ಚಲನ್ ಗಳನ್ನು ಪ್ರಸ್ತುತ ರದ್ದುಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. 

ಕ್ಯಾಮರಾಗಳ ದೃಶ್ಯ ಆಧರಿಸಿ ಆಂಬ್ಯುಲೆನ್ಸ್ ಗೆ ದಾರಿ ಮಾಡುವಾಗ ಸಿಗ್ನಲ್ ಜಂಪ್ ಮಾಡಿದ್ದ ವಾಹನಗಳಿಗೆ ದಂಡ ವಿಧಿಸಿದ ಉದಾಹರಣೆಗಳಿವೆ. ಆದರೆ ಇನ್ನು ಮುಂದೆ ಇದಕ್ಕೆ ಭಯಪಡಬೇಕಾಗಿಲ್ಲ. ಕ್ಯಾಮರಾ ಹೊಂದಿರುವ ಪ್ರತಿ ಸಿಗ್ನಲ್ ನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಐದು ಸೆಕೆಂಡುಗಳ ಕಾಲ ಚಟುವಟಿಕೆಗಳು ರೆಕಾರ್ಡ್ ಆಗುತ್ತವೆ. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ದಾರಿ ಮಾಡಿಕೊಡುವುದಕ್ಕಾಗಿ ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ತಕ್ಷಣವೇ ವಾಹನ ಸವಾರರ ಮೇಲಿನ ದಂಡ ರದ್ದುಗೊಳಿಸಲಾಗುತ್ತದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.  

- Advertisement -

Latest News

error: Content is protected !!