Friday, July 12, 2024
Homeಕರಾವಳಿನೆಲ್ಯಾಡಿ; ಶ್ರೀರಾಮ ವಿದ್ಯಾಲಯದ ನೂತನ ಕೊಠಡಿಗಳ ಲೋಕರ್ಪಣಾ ಕಾರ್ಯಕ್ರಮ ಹಾಗೂ ಆಂಗ್ಲಮಾಧ್ಯಮ ತರಗತಿಗಳ ಪ್ರಾರಂಭೋತ್ಸವ

ನೆಲ್ಯಾಡಿ; ಶ್ರೀರಾಮ ವಿದ್ಯಾಲಯದ ನೂತನ ಕೊಠಡಿಗಳ ಲೋಕರ್ಪಣಾ ಕಾರ್ಯಕ್ರಮ ಹಾಗೂ ಆಂಗ್ಲಮಾಧ್ಯಮ ತರಗತಿಗಳ ಪ್ರಾರಂಭೋತ್ಸವ

spot_img
- Advertisement -
- Advertisement -

ನೆಲ್ಯಾಡಿ; ಶ್ರೀ ರಾಮ ವಿದ್ಯಾಲಯ ನೆಲ್ಯಾಡಿ ಇದರ ನೂತನ ಕೊಠಡಿಗಳ ಲೋಕರ್ಪಣಾ ಕಾರ್ಯಕ್ರಮ ಹಾಗೂ ಆಂಗ್ಲ ಮಾದ್ಯಮ ತರಗತಿಗಳ ಪ್ರಾರಂಭೋತ್ಸವ ದಿನಾಂಕ 12-09-2023ನೇ ಮಂಗಳವಾರ ನಡೆಯಲಿದೆ. ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿವೇಕನಂದ ವಿದ್ಯಾವರ್ದಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ವಹಿಸಲಿದ್ದಾರೆ.  ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರಾದ  ಕೋಟ ಶ್ರೀನಿವಾಸ್  ಪೂಜಾರಿ ಇವರು ನೂತನ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ  ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ  ಭಾಗೀರಥಿ ಮುರುಳ್ಯ, ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಇನ್ವೆಂಟರ್ಸ್ ಎಸೋಸಿಯೇಷನ್ ನ  ದಕ್ಷಿಣ ಭಾರತದ ಪ್ರಾದೇಶಿಕ ನಿರ್ದೇಶಕರಾದ  ವಿಶ್ವಾಸ್ ಯು.ಎಸ್. ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಕೃಷ್ಣಶೆಟ್ಟಿ ಕಡಬ ಮುಂತಾದ ಗಣ್ಯರು ಆಗಮಿಸಲಿದ್ದಾರೆ.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಲೋಕಾರ್ಪಣೆ;

ಇನ್ನು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಲೋಕಾರ್ಪಣೆಗೊಳಿಸಲಾಯಿತು. ಈ ವೇಳೆ
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಮುರಳೀಧರ್, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮೂಲಚಂದ್ರ, ಆಡಳಿತ ಸಮಿತಿಯ ಕೋಶಾಧಿಕಾರಿ ಜಿನ್ನಪ್ಪ ಪೂವಜೆ, ಆಡಳಿತ ಸಮಿತಿಯ ಸದಸ್ಯರಾದ ಸುಬ್ರಾಯ ಪುಣಚ, ಶಿವರಾಮ ಕುರುಡೆಲು, ರವಿ ಹೊಸಹೊಕ್ಲು, ಶಿವಣ್ಣ ಶಿಲ್ಪ ಕನ್ಸ್ಟ್ರಕ್ಷನ್, ಸುಮಾ, ನಮಿತಾ ಮುಂತಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!