Sunday, June 7, 2026
Homeಕರಾವಳಿಕರಾಳ ಶನಿವಾರ: ಇಂದು ದ. ಕ ಜಿಲ್ಲೆಯ ಬಂಟ್ವಾಳದ 3 ಜನರಿಗೆ ಕೊರೋನಾ ಪಾಸಿಟಿವ್

ಕರಾಳ ಶನಿವಾರ: ಇಂದು ದ. ಕ ಜಿಲ್ಲೆಯ ಬಂಟ್ವಾಳದ 3 ಜನರಿಗೆ ಕೊರೋನಾ ಪಾಸಿಟಿವ್

- Advertisement -
- Advertisement -

ಬಂಟ್ವಾಳ: ಮಹಾಮಾರಿ ಕೊರೋನಾ ಆರ್ಭಟ ಸದ್ಯಕ್ಕಂತೂ ನಿಲ್ಲುವುದು ಕಾಣುತ್ತಿಲ್ಲ. ಇಂದು ಜಿಲ್ಲೆಯ ಬಂಟ್ವಾಳದಲ್ಲಿ ಮೂರು ಹೊಸ ಕೇಸ್ ಗಳು ಪತ್ತೆಯಾಗಿದೆ.

ಬಂಟ್ವಾಳದ ಬಂಟ್ವಾಳ ಕಸಬಾ ಪರಿಸರದ ಒಂದೇ ಕುಟುಂಬದ ಇಬ್ಬರು ‌ಮಹಿಳೆಯರು ಮತ್ತು ಓರ್ವ ‌ಪುರುಷನಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ಮೇ.1ರಂದು ಕೊರೋನ ಪತ್ತೆಯಾಗಿದ್ದ 69 ವರ್ಷದ P-578 ವೃದ್ದನಿಂದ ಇವರಿಗೆ ಸೋಂಕು ತಗುಲಿದೆ ಎಂದು ವರದಿಯಲ್ಲಿ ಕಂಡು ಬಂದಿದೆ. ವೃದ್ದನಿಗೆ ಪಾಸಿಟಿವ್ ಹಿನ್ನೆಲೆ ಆ ಮನೆಯ 8 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಸದ್ಯ ಮೂವರಿಗೆ ಸೋಂಕು ತಗುಲಿರುವುದು ದೃಢವಾಗಿದೆ.

ಫಸ್ಟ್ ನ್ಯೂರೋ ಆಸ್ಪತ್ರೆಯ ಹೊಡೆತಕ್ಕೆ ನಲುಗಿದ ಕಡಲತಡಿ ಮಂಗಳೂರು
69 ವರ್ಷದ P-578 ವೃದ್ದನಿಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೃತಪಟ್ಟ P-390 ಬಂಟ್ವಾಳದ ಮಹಿಳೆಯಿಂದ ಸೋಂಕು ತಗುಲಿತ್ತು. ಮಂಗಳೂರಿನ ಫಸ್ಟ್ ನ್ಯೂರೋ ಸಂಪರ್ಕದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಸದ್ಯ ದ‌.ಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ.

  • ದ.ಕ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಪ್ರಕರಣಗಳು 31
  • ದ.ಕ ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 03
  • ದ.ಕ ಜಿಲ್ಲೆಯಲ್ಲಿ ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 13

- Advertisement -

Latest News

error: Content is protected !!