Friday, June 5, 2026
Homeಕರಾವಳಿಬೆಳ್ತಂಗಡಿಯ ಪದ್ಮುಂಜದಲ್ಲಿ ನೆಟ್ ವರ್ಕ್ ಸಮಸ್ಯೆ: ವರ್ಕ್ ಫ್ರಮ್ ಹೋಮ್ ನಲ್ಲಿರುವವರಿಗೆ ನಿತ್ಯವೂ ಪರದಾಟ

ಬೆಳ್ತಂಗಡಿಯ ಪದ್ಮುಂಜದಲ್ಲಿ ನೆಟ್ ವರ್ಕ್ ಸಮಸ್ಯೆ: ವರ್ಕ್ ಫ್ರಮ್ ಹೋಮ್ ನಲ್ಲಿರುವವರಿಗೆ ನಿತ್ಯವೂ ಪರದಾಟ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಕಣಿಯೂರು ಗ್ರಾಮದ ಪದ್ಮುಂಜದಲ್ಲಿ  ಎಲ್ಲಾ ಕಡೆ ವೊಡಾಫೋನ್, ಐಡಿಯಾ ಟವರ್ ಕೈ ಕೊಡುತ್ತಿದ್ದು  ಜನರು ನಿತ್ಯವೂ ಸಮಸ್ಯೆ ಅನುಭವಿಸುವಂತಾಗಿದೆ . ಕಸ್ಟಮರ್ ಕೇರ್ ಕರೆ ಮಾಡಿದರೂ ಅವರಿಂದ ಸರಿಯಾದ ಸ್ಪಂದನೆ ದೊರಕುತ್ತಿಲ್ಲ. ಹೀಗಾಗಿ ಜನ ಹೈರಾಣಾಗಿ ಹೋಗಿದ್ದಾರೆ.ಏನಾದರೂ ತುರ್ತು ಸಂದರ್ಭದಲ್ಲಿ ಕರೆ ಮಾಡಬೇಕು ಅಂದರೆ ದೇವರೇ ಕಾಪಾಡಬೇಕು ಅನ್ನೋ ಸ್ಥಿತಿ ನಿರ್ಮಾಣವಾಗಿದೆ.

 ಇನ್ನು ಆಗಾಗ್ಗೆ ನೆಟ್ ವರ್ಕ್ ಸಮಸ್ಯೆಯಾಗುತ್ತಿರುವುದರಿಂದ ವರ್ಕ್ ಫ್ರಮ್ ಹೋಮ್ ನಲ್ಲಿರುವವರು ಪರದಾಡುವಂತಾಗಿದೆ. ಹಾಗಾಗಿ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನಹರಿಸಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.

- Advertisement -

Latest News

error: Content is protected !!