Wednesday, June 3, 2026
Homeಕರಾವಳಿನೆಲ್ಯಾಡಿ: ಗೋಳಿತ್ತೊಟ್ಟು ಪರಿಸರದ ಪ್ರಸಿದ್ದ ನಾಟಿವೈದ್ಯೆ ರಾಮಕ್ಕ ನಿಧನ

ನೆಲ್ಯಾಡಿ: ಗೋಳಿತ್ತೊಟ್ಟು ಪರಿಸರದ ಪ್ರಸಿದ್ದ ನಾಟಿವೈದ್ಯೆ ರಾಮಕ್ಕ ನಿಧನ

- Advertisement -
- Advertisement -

ನೆಲ್ಯಾಡಿ: ಹಲವು ವರ್ಷಗಳಿಂದ ನಾಟಿ ವೈದ್ಯೆಯಾಗಿ ಚಿರಪರಿಚಿತರಾಗಿದ್ದ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟು ಗ್ರಾಮದ ಪ್ರಸಿದ್ಧ ನಾಟಿ ವೈದ್ಯೆ ರಾಮಕ್ಕ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಸುಮಾರು 75 ವರ್ಷ ವಯಸ್ಸಿನ ರಾಮಕ್ಕ ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಸಂತಾನ ಭ್ಯಾಗ್ಯ ಇಲ್ಲದವರಿಗೆ ಔಷಧ ನೀಡುವ ಮೂಲಕ ಹಲವಾರು ದಂಪತಿಗಳ ಬಾಳಿಗೆ ಬೆಳಕಾಗಿದ್ದ ಈ ನಾಟಿ ವೈದ್ಯೆ. ತನ್ನ ತಂದೆಯಿಂದ ನೋಡಿ ಕಲಿತ ನಾಟಿವೈಧ್ಯ ಪದ್ದತಿ ತಮ್ಮಲ್ಲಿ ರೊಢಿಸಿಕೊಂಡು ಹಲವು ಜೀವಗಳಿಗೆ ವರದಾನಗಿದ್ದರು.

ಅವರ ಸೇವೆಯನ್ನು ಗುರುತಿಸಿ.ಧರ್ಮಸ್ಥಳ ದೇಗುಲದ ವತಿಯಿಂದ ಸೇರಿದಂತೆ ಹಲವಾರು ಸಂಘಸಂಸ್ಥೆಗಳ ವತಿಯಿಂದ,ಸಮ್ಮಾನಿತರಾಗಿದ್ದರು. ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾದ ರಾಮಕ್ಕ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!