Thursday, June 4, 2026
Homeಕರಾವಳಿನೆಲ್ಯಾಡಿಯ ಹೆಸರಾಂತ ಉದ್ಯಮಿ ಯು.ಪಿ.ವರ್ಗೀಸ್ ವಿಧಿವಶ

ನೆಲ್ಯಾಡಿಯ ಹೆಸರಾಂತ ಉದ್ಯಮಿ ಯು.ಪಿ.ವರ್ಗೀಸ್ ವಿಧಿವಶ

- Advertisement -
- Advertisement -

ಕಡಬ: ನೆಲ್ಯಾಡಿಯ ಹೆಸರಾಂತ ಉದ್ಯಮಿ ರಬ್ಬರ್ ವರ್ಗಿಸ್ ಎಂದೇ ಖ್ಯಾತರಾಗಿದ್ದ ಉನ್ನುಕಲ್ಲಿಂಗಲ್ ನಿವಾಸಿ ಯು.ಪಿ.ವರ್ಗೀಸ್( 80 ವ) ರವರು ನಿನ್ನೆ ನಿಧನರಾಗಿದ್ದಾರೆ.

ನೆಲ್ಯಾಡಿಯ  ಅಭಿವೃದ್ದಿಯಲ್ಲಿ ಪ್ರಮುಖ ಪ್ರಾತ್ರ ವಹಿಸಿದ್ದ ಎಲೈಟ್ ರಬ್ಬರ್ ಇಂಡಸ್ಟ್ರೀಸ್ ಹಾಗೂ ಎಲೈಟ್ ಸಮೂಹ ಸಂಸ್ಥೆಗಳ ಸ್ಥಾಪಕರಾಗಿದ್ದಾರೆ. ಬಹುದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಇಹಲೋಕ ತ್ಯಜಿಸಿದ್ದಾರೆ.

ಮೃತರು ಪತ್ನಿ ಅನ್ನಮ್ಮ, ಪುತ್ರರಾದ ಶಾಜಿ, ಸೈಬು, ಸೈಜು, ಪುತ್ರಿಯರಾದ ಎಲಿನಾ, ಶೈಬಿಯವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!