Thursday, June 4, 2026
Homeತಾಜಾ ಸುದ್ದಿಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ಗಾಯಕಿ ನೇಹಾ ಕಕ್ಕರ್..

ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ಗಾಯಕಿ ನೇಹಾ ಕಕ್ಕರ್..

- Advertisement -
- Advertisement -

ಸಾಮಾಜಿಕ ಜಾಲತಾಣಗಳು ವ್ಯಕ್ತಿಗಳ ನಡುವೆ ಬಾಂಧವ್ಯ ಬೆಳೆಸುವ ಬದಲಾಗಿ ಇಂದು ದ್ವೇಷವನ್ನು ಉತ್ಪಾದಿಸುವ ಕೇಂದ್ರಗಳಾಗುತ್ತಿವೆ. ಹೀಗಾಗಿ ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಿಂದ ಹೊರಬೀಳುತ್ತಿದ್ದು ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. 

ಅದರಲ್ಲೂ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಬಳಿಕ ಬಾಲಿವುಡ್ ಚಿತ್ರರಂಗದಲ್ಲಿ ಹೊರಗಿನವರು ಹಾಗೂ ಒಳಗಿನವರು ಎಂಬ ಚರ್ಚೆ ನಡೆಯುತ್ತಿದ್ದು, ಚಿತ್ರರಂಗದ ಕುಟುಂಬದಿಂದ ಬಂದವರನ್ನು ಗುರಿಯಾಗಿಸಿಕೊಂಡು ಬಹಳಷ್ಟು ಮಂದಿ ಟ್ರೋಲ್ ಮಾಡುತ್ತಿದ್ದಾರೆ. 

ಹೀಗಾಗಿ ಕಳೆದ ವಾರ ಸೋನಾಕ್ಷಿ ಸಿನ್ಹಾ ಟ್ವಿಟರ್ ತೊರೆದಿದ್ದು, ಸೋನಂ ಕಪೂರ್ ತಮ್ಮನ್ನು ಟ್ರೋಲ್ ಮಾಡುತ್ತಿರುವ ಕುರಿತು ಬರೆದುಕೊಂಡಿದ್ದರು. ಇದೀಗ ಖ್ಯಾತ ಗಾಯಕಿ ನೇಹಾ ಕಕ್ಕರ್ ಸಾಮಾಜಿಕ ಜಾಲತಾಣ ತೊರೆದಿದ್ದು, ಸ್ವಜನಪಕ್ಷಪಾತ, ದ್ವೇಷ, ಹೊಟ್ಟೆಕಿಚ್ಚು ಇಂತವುಗಳಿಂದ ದೂರವಿರಲು ಬಯಸಿದ್ದೇನೆ ಎಂದಿದ್ದಾರೆ.

- Advertisement -

Latest News

error: Content is protected !!