Thursday, June 25, 2026
Homeತಾಜಾ ಸುದ್ದಿಅಪ್ರಾಪ್ತೆಯರಿಗೆ ಬೆತ್ತಲೆ ಫೋಟೋ ಕಳುಹಿಸುವಂತೆ ಪೀಡಿಸುತ್ತಿದ್ದವ ಅಂದರ್

ಅಪ್ರಾಪ್ತೆಯರಿಗೆ ಬೆತ್ತಲೆ ಫೋಟೋ ಕಳುಹಿಸುವಂತೆ ಪೀಡಿಸುತ್ತಿದ್ದವ ಅಂದರ್

- Advertisement -
- Advertisement -

ಬೆಂಗಳೂರು: ಅಪ್ರಾಪ್ತೆಯರಿಗೆ ಬೆತ್ತಲೆ ಫೋಟೋಗಳನ್ನು ಕಳುಹಿಸುವಂತೆ ಪೀಡಿಸುತ್ತಿದ್ದ ಕಾಮುಕನನ್ನು ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿ ಜಗದೀಶ್ ಬಂಧಿತ ಆರೋಪಿ.

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವಂತಹ ಅಪ್ರಾಪ್ತ ಬಾಲಕಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಪಾಪಿ ಜಗದೀಶ್ ಪದೇ ಪದೆ ಕಾಲ್ ಮಾಡಿ ಕಿರುಕುಳ ನೀಡ್ತಿದ್ದ. ಯುವತಿಯರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಅಕೌಂಟ್ ಕ್ರಿಯೇಟ್ ಮಾಡಿ ಚಾಟಿಂಗ್ ಮಾಡ್ತಿದ್ದ. ಬೆತ್ತಲೆ ಫೋಟೋಗೆ ಡಿಮ್ಯಾಂಡ್ ಮಾಡ್ತಿದ್ದ. ಬೆತ್ತಲೆ ಫೋಟೋ ಕಳಿಸದಿದ್ದರೆ ಅಪ್ರಾಪ್ತೆಯರ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದು I’m available ಎಂದು ಪೋಸ್ಟ್ ಹಾಕಿ ಫೋನ್ ನಂಬರ್ ಹಾಕ್ತಿದ್ದ. ಕೆಟ್ಟದಾಗಿ ಯುವತಿಯರನ್ನ ಬಿಂಬಿಸಿ, ಅದೇ ರೀತಿ ಫೋಟೋ ಕಳುಹಿಸುವಂತೆ ವಿವಿಧ ನಂಬರ್ಗಳಿಗೆ ಮೆಸೇಜ್ ಮಾಡಿ ತೊಂದರೆ ಕೊಡುತ್ತಿದ್ದ.

ಇದೇ ರೀತಿ ವೈಟ್ ಫೀಲ್ಡ್ನ ಅಪ್ರಾಪ್ತೆಗೆ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು ಕಿರುಕುಳ ನೀಡ್ತಿದ್ದ. ಬೇಸತ್ತ ಬಾಲಕಿ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಅಲರ್ಟ್ ಆದ ಪೋಷಕರು ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದೇ ಆರೋಪಿ ವಿರುದ್ಧ ಒಂದೇ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಹೀಗಾಗಿ ಆರೋಪಿ ಪತ್ತೆಗಾಗಿ ಪೊಲೀಸರು ವಿಶೇಷ ಟೀಂ ರೆಡಿ ಮಾಡಿ ಬಂಧಿಸಿದ್ದಾರೆ. ಜಗದೀಶ್ನ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ.

- Advertisement -

Latest News

error: Content is protected !!