- Advertisement -
![]()
- Advertisement -
ಮಂಗಳೂರು:ಇಲ್ಲಿನ ಏರ್ ಪೋರ್ಟ್ ನಲ್ಲಿ ದ್ವಿಚಕ್ರ ವಾಹನಗಳಿಗೆ ಹೊಸ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಏರ್ ಪೋರ್ಟ್ ನ ಪ್ರವೇಶ ದ್ವಾರದ ಬಳಿ 690 ಚದರ ಮೀಟರ್ ಪ್ರದೇಶದಲ್ಲಿ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಇಲ್ಲಿ130 ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಬಹುದು.
ಒಟ್ಟು 300 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದೀಗ ಏರ್ ಪೋರ್ಟ್ ನ ಒಟ್ಟು ಪಾರ್ಕಿಂಗ್ ಸ್ಥಳಗಳ ಸಂಖ್ಯೆ ಏಳಕ್ಕೇರಿದ್ದು, ಉಳಿದ ಐದು ಪಾರ್ಕಿಂಗ್ ದ್ವೀಪಗಳನ್ನು ಚತುಷ್ಟಕ ವಾಹನಗಳಿಗೆ ಮೀಸಲಿಡಲಾಗಿದೆ. ಇಲ್ಲಿ 300 ಚತುಷ್ಟಕ ವಾಹನಗಳನ್ನು ಇರಿಸುವ ಸಾಮರ್ಥ್ಯವನ್ನು ಹೊಂದಿದೆ.
ಅಪ್ಲಿಕೇಶನ್-ಆಧಾರಿತ ಟ್ಯಾಕ್ಸಿ ಅಗ್ರಿಗೇಟರ್‌ಗಳು, ಪ್ರಿ-ಪೇಯ್ಡ್ ಏರ್‌ಪೋರ್ಟ್ ಟ್ಯಾಕ್ಸಿ ಸೇವೆಗಳು, ಖಾಸಗಿ ಮತ್ತು ಅಧಿಕೃತ ವಾಹನಗಳಿಗಾಗಿ ಪಾರ್ಕಿಂಗ್ ಜಾಗ ಕೂಡಾ ಇದರಲ್ಲಿ ಸೇರಿದೆ.
- Advertisement -


