Sunday, June 7, 2026
Homeತಾಜಾ ಸುದ್ದಿಮುಂಬೈ: ಶಾರುಖ್ ಖಾನ್, ಅನನ್ಯ ಪಾಂಡೆ ಮನೆ ಮೇಲೆ ಎನ್ ಸಿ ಬಿ ದಾಳಿ!

ಮುಂಬೈ: ಶಾರುಖ್ ಖಾನ್, ಅನನ್ಯ ಪಾಂಡೆ ಮನೆ ಮೇಲೆ ಎನ್ ಸಿ ಬಿ ದಾಳಿ!

- Advertisement -
- Advertisement -

ಮುಂಬೈ: ಬಾಲಿವುಡ್‌ ನಟ ಶಾರೂಖ್‌ ಖಾನ್‌ ಸೇರಿದಂತೆ ಹಲವು ನಟ ನಟಿಯರ ಮನೆಗೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ.

ಶಾರೂಖ್ ಪುತ್ರ ಆರ್ಯನ್ ಖಾನ್ ಅವರ ಚಾಟಿಂಗ್ ಹಿಸ್ಟರಿ ಪಡೆದ ನಂತರ ಇಬ್ಬರು ಮಹಿಳಾ ನಟಿಯರು ಆರ್ಯನ್ ಖಾನ್ ಅವರೊಂದಿಗೆ ಚಾಟ್‌ ಮಾಡಿರುವುದು ತಿಳಿದುಬಂದಿದೆ. ಹಾಗಾಗಿ ಈ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.



ಇಂದು ಮುಂಜಾನೆ ನಟ ಶಾರುಖ್ ಖಾನ್ ಆರ್ಥರ್ ರೋಡ್ ಜೈಲಿಗೆ ತೆರಳಿ ಪುತ್ರ ಆರ್ಯನ್​ರನ್ನು ಭೇಟಿಯಾಗಿದ್ದರು. ಇದಾದ ಕೆಲವು ಸಮಯದ ನಂತರ ಎನ್​ಸಿಬಿ ಶೋಧಕ್ಕಾಗಿ ದಾಳಿ ನಡೆಸಿದೆ. ಪ್ರಸ್ತುತ ಆರ್ಯನ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದು, ಹೈಕೋರ್ಟ್​ನಲ್ಲಿ ಅಕ್ಟೋಬರ್ 26ರಂದು ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.



ಇನ್ನು ಎನ್​ಸಿಬಿಯ ಮತ್ತೊಂದು ತಂಡ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮನೆಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ಇದೇ ವೇಳೆ ಎನ್​ಸಿಬಿ ಅನನ್ಯಾ ಪಾಂಡೆಗೆ ಸಮನ್ಸ್ ಜಾರಿ ಮಾಡಿದೆ ಎಂದು ಹೇಳಲಾಗಿದೆ .

- Advertisement -

Latest News

error: Content is protected !!