ಸವಣಾಲು: ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿನ ವರ್ಷಪ್ರತಿ ಆಚರಣೆಯ ನವರಾತ್ರಿ ಉತ್ಸವವು ಅ.15 ಭಾನುವಾರ ದಿಂದ ಅ.24ನೇ ಮಂಗಳವಾರದ ವರೆಗೆ ನಡೆಯಲಿದೆ.
ನವರಾತ್ರಿ ಉತ್ಸವದ ಪ್ರತಿದಿನ ಶ್ರೀ ಕ್ಷೇತ್ರದಲ್ಲಿ ಚಂಡಿಕಾಹೋಮ ಹಾಗೂ ವಿಶೇಷ ಪೂಜೆ ನಡೆಯಲಿದ್ದು, ತಾ. 24/10/2023 ಮಂಗಳವಾರ ಸಾರ್ವಜನಿಕ ಚಂಡಿಕಾಹೋಮ ನಡೆಯಲಿರುವುದು.

20/10/2023ರಂದು ಶಾರದಾ ಪೂಜೆ, ತಾ. 22/10/2023, ರವಿವಾರ ದಂದು ಬೆಳಗ್ಗೆ 09:00 ಗಂಟೆಗೆ ಶ್ರೀ ಕಾಳಿಗುಡಿಯಲ್ಲಿ ತೆನೆ ಪೂಜೆ, ಮಧ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ಅಷ್ಟಾವದಾನ, ರಂಗಪೂಜೆ, ವಾಹನ ಪೂಜೆ ಜರಗಲಿರುವುದು..
ಅ.23 ಸೋಮವಾರದಂದು ಬೆಳಗ್ಗೆ 08:00ರಿಂದ 10:00 ರವರೆಗೆ ಅಕ್ಷರಾಭ್ಯಾಸ, ಸಂಜೆ 05:00 ಗಂಟೆಯಿಂದ ವಾಹನ ಪೂಜೆ, ಶ್ರೀ ಮೂಲದುರ್ಗಾ ದೇವಿಗೆ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ನಡೆಯಲಿದೆ.
ಅ.24 ನಡೆಯಲಿರುವ ಸಾರ್ವಜನಿಕ ಚಂಡಿಕಾಹೋಮವು 500 ರೂ ಬಾಪ್ತು ಅನ್ನು ಹೊಂದಿರುತ್ತದೆ.
ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.