Friday, June 28, 2024
Homeಕರಾವಳಿಮಂಗಳೂರುನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ್ತಾರೆ; ಮೈಸೂರಿನ ಕಾಲಭೈರವೇಶ್ವರ ದೇವಸ್ಥಾನದ ಶ್ವಾನ ಭವಿಷ್ಯ

ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ್ತಾರೆ; ಮೈಸೂರಿನ ಕಾಲಭೈರವೇಶ್ವರ ದೇವಸ್ಥಾನದ ಶ್ವಾನ ಭವಿಷ್ಯ

spot_img
- Advertisement -
- Advertisement -

ಮೈಸೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ್ತಾರೆ ಎಂದು ಮೈಸೂರಿನ ಕಾಲಭೈರವೇಶ್ವರ ದೇವಸ್ಥಾನದ ಶ್ವಾನ ಭವಿಷ್ಯ ನುಡಿದಿದೆ. ಈ ಹಿಂದೆ ಈ ಶ್ವಾನ ನುಡಿದ ಅನೇಕ ಭವಿಷ್ಯ ನಿಜವಾಗಿದೆ. ಇದೀಗ ಮೋದಿಯೇ ಪ್ರಧಾನಿಯಾಗ್ತಾರೆ ಎಂದು ಭವಿಷ್ಯ ನುಡಿದಿದೆ.

ಕಾಲಭೈರವೇಶ್ವರ ದೇವಾಲಯದಲ್ಲಿ ಅರ್ಚಕರು ಈ ದೇಶದ ಪ್ರಧಾನಿ ಯಾರು ಆಗಲಿದ್ದಾರೆ ಅಂತ ರಾಹುಲ್ ಗಾಂಧಿ ಹಾಗೂ ಮೋದಿ ಪೋಟೋಗಳನ್ನು ಶ್ವಾನದ ಎದುರು ಇಟ್ಟು ಕೇಳಿದ್ದಾರೆ. ಭೈರವನ ಶ್ವಾನ ಪೂಜೆಯ ಬಳಿಕ ಮೋದಿ ಪೋಟೋವನ್ನು ಬಾಯಿಯಿಂದ ಕಚ್ಚಿಕೊಂಡು ಭವಿಷ್ಯ ನುಡಿದಿದೆ.

ಇದಲ್ಲದೇ ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಗೆಲ್ಲುತ್ತಾರೆ ಎಂಬುದಾಗಿಯೂ ಭವಿಷ್ಯ ನುಡಿದಿರೋದಾಗಿ ತಿಳಿದು ಬಂದಿದೆ. ಈಗ ಭೈರವೇಶ್ವರನ ಶ್ವಾನ ಭವಿಷ್ಯ ನುಡಿದಿರುವಂತ ವೀಡಿಯೋ, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

- Advertisement -
spot_img

Latest News

error: Content is protected !!