Friday, March 29, 2024
Homeತಾಜಾ ಸುದ್ದಿಕ್ಯಾನ್ಸರ್​ ಮಾಂತ್ರಿಕರೆಂದೇ ಹೆಸರಾಗಿದ್ದ ನರಸೀಪುರದ ನಾಟಿ ವೈದ್ಯ ನಾರಾಯಣ ಮೂರ್ತಿ ನಿಧನ

ಕ್ಯಾನ್ಸರ್​ ಮಾಂತ್ರಿಕರೆಂದೇ ಹೆಸರಾಗಿದ್ದ ನರಸೀಪುರದ ನಾಟಿ ವೈದ್ಯ ನಾರಾಯಣ ಮೂರ್ತಿ ನಿಧನ

spot_img
- Advertisement -
- Advertisement -

ಶಿವಮೊಗ್ಗ:ಕ್ಯಾನ್ಸರ್ ಸೇರಿದಂತೆ ಕೆಲವೊಂದು ರೋಗಗಳಿಗೆ ನಾಟಿ ಔಷಧ ನೀಡುವ ಮೂಲಕ ಪ್ರಸಿದ್ಧಿ ಪಡೆದಿದ್ದ ಸಾಗರ ತಾಲೂಕಿನ ನರಸೀಪುರ ಗ್ರಾಮ ನಾರಾಯಣ ಮೂರ್ತಿ(80) ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಕಳೆದ ಮೂರು ದಶಕದಿಂದಲೂ ನಾಟಿ ಔಷಧ ನೀಡುತ್ತಾ ಬಂದಿದ್ದ ನಾರಾಯಣ ಮೂರ್ತಿ ಅವರು ಪತ್ನಿ ಒಬ್ಬ ಮಗ ಹಾಗೂ ನಾಲ್ಕು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಮತ್ತು ಸ್ನೇಹಿತರನ್ನು ಆಗಲಿರುತ್ತಾರೆ.

ಆರಂಭದ ವರ್ಷದಲ್ಲಿ ಕಿಡ್ನಿ ಕಲ್ಲು ಕರಗಲು ನಾಟಿ ಔಷಧ ನೀಡುತ್ತಿದ್ದ ಮೂರ್ತಿ ನಂತರದಲ್ಲಿ ಕ್ಯಾನ್ಸರ್, ಚರ್ಮದ ಕಾಯಿಲೆಗಳಿಗೂ ಔಷಧ ನೀಡುತ್ತಿದ್ದರು. ಕ್ಯಾನ್ಸರ್ ಗೆ ಔಷಧ ಬಯಸಿ ಬರುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿತ್ತು. ದೇಶದ ಹಲವು ರಾಜ್ಯಗಳಲ್ಲದೆ ದೂರದ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತಿತರ ದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಕ್ಯಾನ್ಸರ್ ಗೆ ಔಷಧ ಬಯಸಿ ಬರುತ್ತಿದ್ದರು.

ಇವರ ಬಳಿ ಕ್ಯಾನ್ಸರ್ ಔಷಧಿಗಾಗಿ ಭಾರತದ ಹಲವು ರಾಜ್ಯಗಳಲ್ಲದೆ ಆಸ್ಟ್ರೇಲಿಯಾ, ಶ್ರೀಲಂಕಾಗಳಿಂದ ಜನ ಆಗಮಿಸುತ್ತಿದ್ದರು. ದೇಶ, ವಿದೇಶದ ಪ್ರಸಿದ್ಧ ಉದ್ಯಮಿಗಳು, ಸೆಲೆಬ್ರಿಟಿಗಳು, ರಾಜಕೀಯ ನಾಯಕರು, ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು ಔಷಧ ಬಯಸಿ ಬರುತ್ತಿದ್ದ ಕಾರಣ ನರಸೀಪುರದ ಹೆಸರು ಪ್ರಸಿದ್ಧಿ ಪಡೆದಿತ್ತು. ಇದರ ಜೊತೆಗೆ ದೇಶ, ವಿದೇಶದ ಸುದ್ದಿ ವಾಹಿನಿ ಹಾಗೂ ಪತ್ರಿಕೆಗಳಲ್ಲಿ ನಾರಾಯಣ ಮೂರ್ತಿ ಅವರ ವಿಶೇಷ ಸಂದರ್ಶನ, ಲೇಖನ ಪ್ರಕಟಗೊಂಡಿತ್ತು.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಔಷಧ ಕೊಡುವುದನ್ನು ನಿಲ್ಲಿಸಿದ್ದರೂ ಔಷಧ ಬಯಸಿ ಜನರು ಬರುತ್ತಲೇ ಇದ್ದರು. ಇದರಿಂದಾಗಿ ಗ್ರಾಮದಲ್ಲಿ ಸಾಕಷ್ಟು ಪ್ರತಿಭಟನೆಗಳೂ ನಡೆದಿತ್ತಲ್ಲದೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರಿಂದಾಗಿ ಬಹಳಷ್ಟು ದೂರದಿಂದ ಬಂದಿದ್ದ ಜನರು ಔಷಧವಿಲ್ಲದೆ ಬರಿಗೈಲಿ ಹಿಂತಿರುಗುತ್ತಿದ್ದರು.

ಪ್ರತೀ ಗುರುವಾರ ಮತ್ತು ಭಾನುವಾರ ದೇಶದ ವಿವಿಧ ಮೂಲೆಯಿಂದ ಬರುವ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದರು. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಕೊನೆಯ ಆಶಾಕಿರಣವಾಗಿದ್ದರು. ತಾವೇ ಕಾಡಿನಿಂದ ಗಿಡಮೂಲಿಕೆಗಳನ್ನ ಆರಿಸಿಕೊಂಡು ಬಂದು ಔಷಧಿಗಳನ್ನು ಸಿದ್ಧಪಡಿಸುತ್ತಿದ್ದರು. 25ಕ್ಕೂ ಹೆಚ್ಚು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ನಾರಾಯಣಮೂರ್ತಿಗಳೊಂದಿಗೆ ೧೦ ಕ್ಕೂ ಹೆಚ್ಚು ಸೇವಾಸಂಸ್ಥೆಗಳು ಕೈಜೋಡಿಸಿದ್ದವು.

ಇವರ ಅಕಾಲಿಕ ಮರಣಕ್ಕೆ ಶಿವಮೊಗ್ಗ ಜಿಲ್ಲಾ ಸಂಸದರಾದ ರಾಘವೇಂದ್ರ, ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಕಾಗೋಡು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದೀಗ ನಾರಾಯಣ ಮೂರ್ತಿ ಅವರ ನಿಧನದಿಂದಾಗಿ ಪಾರಂಪರಿಕವಾಗಿ ಬಂದಿರುವ ನಾಟಿ ವೈದ್ಯ ಪದ್ಧತಿಯನ್ನು ಅವರ ಪುತ್ರ ಮುಂದುವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

- Advertisement -
spot_img

Latest News

error: Content is protected !!