- Advertisement -
![]()
- Advertisement -
ಬೆಳ್ತಂಗಡಿ: ಉಜಿರೆಯಲ್ಲಿ ಬೆಂಕಿ ಆಕಸ್ಮಿಕದಿಂದ ಅಂಗಡಿಗಳು ಸುಟ್ಟು ಹೋಗಿದ್ದು ಘಟನಾ ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ನಿನ್ನೆ ಭೇಟಿ ನೀಡಿದರು.

ಬೆಂಕಿ ಆಕಸ್ಮಿಕದಿಂದಾಗಿ ಅನಾರ್ ಟಯರ್ಸ್ ಸೇರಿದಂತೆ ಎರಡು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದವು. ಇಲ್ಲಿಗೆ ಭೇಟಿ ನೀಡಿದ ಸಂಸದರು ಹಾನಿಗೊಳಗಾದ ಅಂಗಡಿಗಳ ಮಾಲೀಕರ ಜೊತೆ ಮಾತುಕತೆ ನಡೆಸಿದರು. ಅಂಗಡಿಗಳನ್ನು ಪರಿಶೀಲಿಸಿ ಅಗತ್ಯ ನೆರವನ್ನು ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕುಶಾಲಪ್ಪ ಗೌಡ ಹಾಗೂ ಇತರರು ಇದ್ದರು.
- Advertisement -


