Thursday, June 4, 2026
Homeಕರಾವಳಿಆರ್ ಎಸ್ ಎಸ್ ಮತ್ತು ಭಜರಂಗದಳದ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇಲ್ಲದಾಗುತ್ತದೆ; ಬಿಜೆಪಿ ರಾಜ್ಯಾಧ್ಯಕ್ಷ...

ಆರ್ ಎಸ್ ಎಸ್ ಮತ್ತು ಭಜರಂಗದಳದ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇಲ್ಲದಾಗುತ್ತದೆ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ

- Advertisement -
- Advertisement -

ಮಂಗಳೂರು; ಆರ್ ಎಸ್ ಎಸ್ ಮತ್ತು ಭಜರಂಗದಳದ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇಲ್ಲದಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ..


ಮಂಗಳೂರಿನಲ್ಲಿ ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ ಬಾಯಿಗೆ ಹಿಡಿತ ಇಟ್ಟುಕೊಂಡು, ನಾಲಿಗೆ ಹಿಡಿತದಲ್ಲಿ ಮಾತನಾಡಲಿ. ಭಜರಂಗದಳ, ಆರ್.ಎಸ್.ಎಸ್ ನಿಷೇಧ ಮಾಡಲು ನಿಮಗೆ ಹಕ್ಕಿಲ್ಲ. ಪಿಎಫ್ಐ ಅನ್ನ ನಾವು ನಿಷೇಧ ಮಾಡಿದ್ದೇವೆ, ಇವರೇನು ನಿಷೇಧ ಮಾಡೋದು? ಎಂದು ಗುಡುಗಿದ್ದಾರೆ.

ನೆಹರೂ ಆರ್ ಎಸ್ಎಸ್ ನಿಷೇಧಕ್ಕೆ ಕೈ ಹಾಕಿ ಸುಟ್ಟುಕೊಂಡಿದ್ದಾರೆ, ಭಜರಂಗದಳ, ಆರ್‌ಎಸ್‌‌ಎಸ್‌ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ, ಸಿದ್ದರಾಮಯ್ಯ ರಾಜಕೀಯ ಮುಗಿಯುತ್ತೆ. ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆಗೆ ತಾಕತ್ ಇದ್ದರೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನ ಬಂಧಿಸಿ. ನಿಮ್ಮ ಮೆರವಣಿಗೆ, ವಿಜಯೋತ್ಸವ, ಸಭೆಗಳಲ್ಲೇ ಪಾಕಿಸ್ತಾನ ಪರ ಘೋಷಣೆ ಬಂದಿದೆ. ಅದು ಬಿಟ್ಟು ರಾಜ್ಯವನ್ನ ವಿಭಜನಾವಾದದ ಮೂಲಕ ಕಟ್ಟೋದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಂದು ತಿರುಗೇಟು ಕೊಟ್ಟಿದ್ದಾರೆ.

- Advertisement -

Latest News

error: Content is protected !!