Sunday, June 7, 2026
Homeಕರಾವಳಿಮಂಗಳೂರು; ಶ್ರೀ ದೇವಿ ಭಜನಾ ಮಂದಿರ ಸೇವಾ ಟ್ರಸ್ಟ್ , ಬಾಳ ವತಿಯಿಂದ ನಗರ ಭಜನೆ

ಮಂಗಳೂರು; ಶ್ರೀ ದೇವಿ ಭಜನಾ ಮಂದಿರ ಸೇವಾ ಟ್ರಸ್ಟ್ , ಬಾಳ ವತಿಯಿಂದ ನಗರ ಭಜನೆ

- Advertisement -
- Advertisement -

ಮಂಗಳೂರು; ಶ್ರೀ ದೇವಿ ಭಜನಾ ಮಂದಿರ ಸೇವಾ ಟ್ರಸ್ಟ್ (ರಿ) ಒಟ್ಟೆಕಾಯರ್, ಬಾಳ ಗ್ರಾಮ. ಇದರ ವತಿಯಿಂದ ದಿ, 14/04/2023  ಶುಕ್ರವಾರದಂದು ಸೌರಮಾನ ಯುಗಾದಿಯ ಪ್ರಯುಕ್ತ ಯುಗಾದಿ ಉತ್ಸವ ಹಾಗೂ ನಗರ ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಜನೆ ಜೊತೆಗೆ ಗ್ರಾಮಸ್ಥರು ಸೇರಿ ಹೆಜ್ಜೆ ಹಾಕಿ ನಡೆಸಿದ ಕುಣಿತ ಭಜನೆ ಪ್ರಮುಖ ಆಕರ್ಷಣೆಯಾಗಿತ್ತು.  ಪುರೋಹಿತರಾಗಿ ಮಹೇಶ್ ಮೂರ್ತಿ ಸುರತ್ಕಲ್ ಪೂಜಾ ಕಾರ್ಯಕ್ರಮ ನೆರವೇರಿಸಿ ಗ್ರಾಮದ ಹಾಗೂ ಗ್ರಾಮಸ್ಥರ ಏಳಿಗೆಗಾಗಿ ಶ್ರೀ ದೇವರಲ್ಲಿ ಪ್ರಾರ್ಥಿಸಿದರು.

“ಎಲ್ಲಿ ಭಜನೆ ಇದೆಯೋ, ಅಲ್ಲಿ ವಿಭಜನೆ ಇರಲಾರದು” ಅನ್ನುವ ಮೂಲಕ  ಜಾತಿ, ಪಕ್ಷ ಎನ್ನದೆ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಭಜನಾ ಸಂಕೀರ್ತನೆ ಮಾಡುವ ಮೂಲಕ ಸರ್ವರಿಗೂ ಶ್ರೀ ದುರ್ಗಾ ದೇವಿಯ ಕೃಪೆ ಪ್ರಾಪ್ತಿಯಾಗಲೆಂದು ಭಾಸ್ಕರ್ ರಾವ್ ಬಾಳ ಪ್ರಾರ್ಥಿಸಿದರು.

- Advertisement -

Latest News

error: Content is protected !!