Tuesday, May 21, 2024
Homeಕರಾವಳಿಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ಧ ದೂರು ದಾಖಲಿಸಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ಧ ದೂರು ದಾಖಲಿಸಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್

spot_img
- Advertisement -
- Advertisement -

ಕಾರ್ಕಳ; ಚುನಾವಣಾ ಫಲಿತಾಂಶ ಹೊರ ಬಿದ್ರೂ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹಾಗೂ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನಡುವಿನ ವಾರ್ ಮಾತ್ರ ನಿಂತಿಲ್ಲ. ಇದೀಗ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸುನಿಲ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ.

ಕಾರ್ಕಳ ನಗರದ ಠಾಣೆಗೆ ಬೆಂಬಲಿಗರೊಂದಿಗೆ ತೆರಳಿದ ಪ್ರಮೋದ್ ಮುತಾಲಿಕ್, ಶಾಸಕರ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದ್ದಾರೆ .ಬಿಜೆಪಿ ವಿಜಯೋತ್ಸವ ಸಭೆಯಲ್ಲಿ ಮುತಾಲಿಕ್ ವಿರುದ್ಧ ಸುನಿಲ್ ಕುಮಾರ್ ಮಾತನಾಡಿ, ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್, ಮುಂದಿನ ಲೋಕಸಭೆಗೆ ಎಲ್ಲಿಗೆ ಡೀಲ್ ಮಾಡಲು ಹೊರಟಿದ್ದೀರಾ? ಉತ್ತರ ಕರ್ನಾಟಕದಲ್ಲಿ ಟೈಗರ್ ಗ್ಯಾಂಗ್ ಹೆಸರಿನಲ್ಲಿ ಎಷ್ಟು ಹಿಂದೂಗಳ‌ ಹತ್ಯೆ ಮಾಡಿಸಿದ್ದೀರಿ ಎಂದು ಪ್ರಶ್ನಿಸಿದ್ದರು.ಸುನಿಲ್ ಕುಮಾರ್ ಭಾಷಣದ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ಹಿನ್ನೆಲೆ ಪ್ರಮೋದ್ ಮುತಾಲಿಕ್, ಸುನಿಲ್ ಕುಮಾರ್ ವಿರುದ್ಧ ಮಾನಹಾನಿ ದೂರು ದಾಖಲಿಸಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ಸ್ಪರ್ಧಿಸಿದ್ದರು.
ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ಕೇವಲ 4 ಸಾವಿರ ಮತಗಳನ್ನು ಪಡೆದುಕೊಂಡಿದ್ದರು.

- Advertisement -
spot_img

Latest News

error: Content is protected !!