Wednesday, June 24, 2026
Homeಕರಾವಳಿಉಪ್ಪಿನಂಗಡಿ: ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಮಹಿಳೆಗೆ ಅನ್ಯಕೋಮಿನ ಯುವಕನಿಂದ ಕಿರುಕುಳ: ಅರ್ಧದಲ್ಲಿಯೇ ಬಸ್ ನಿಂದ...

ಉಪ್ಪಿನಂಗಡಿ: ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಮಹಿಳೆಗೆ ಅನ್ಯಕೋಮಿನ ಯುವಕನಿಂದ ಕಿರುಕುಳ: ಅರ್ಧದಲ್ಲಿಯೇ ಬಸ್ ನಿಂದ ಇಳಿದ ಮಹಿಳೆ

- Advertisement -
- Advertisement -

ಉಪ್ಪಿನಂಗಡಿ: ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಮಹಿಳೆಗೆ ಅನ್ಯಕೋಮಿನ ಯುವಕನೊಬ್ಬ ಕಿರುಕುಳ ನೀಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಭಾರತಿ ಸ್ಲೀಪರ್ ಬಸ್ ನಲ್ಲಿ ಬೆಂಗಳೂರಿನಿಂದ ಉಪ್ಪಿನಂಗಡಿಯ ಸಂಬಂಧಿಕರ ಮನೆಗೆ ಬಂದಿದ್ದ ಮಹಿಳೆಯೊಬ್ಬರು ಸೀಟ್ ಬುಕ್ ಮಾಡಿದ್ದರು. ಅದರಂತೆ ರಾತ್ರಿ ಮಗುವಿನೊಂದಿಗೆ ಉಪ್ಪಿನಂಗಡಿಯಲ್ಲಿ ಭಾರತಿ ಬಸ್ ಹತ್ತಿದ್ದಾರೆ.

ಬಸ್ ಹತ್ತಿ ನೋಡಿದಾಗ ತಾವು ಬುಕ್ ಮಾಡಿದ ಸೀಟಿನಲ್ಲಿ ಮದ್ಯದ ಅಮಲಿನಲ್ಲಿದ್ದ ಅನ್ಯಕೋಮಿನ ಯುವಕನೊಬ್ಬ ಕುಳಿತಿದ್ದ. ಕೂಡಲೇ ಅವರು ಅದನ್ನು ಕಂಡೆಕ್ಟರ್ ಗಮನಕ್ಕೆ ತಂದಿದ್ದಾರೆ.ಕಂಡಕ್ಟರ್ ಆತನನ್ನು ಎಬ್ಬಿಸಲು ಪ್ರಯತ್ನಿಸಿದರೂ ಆತ ಅಲ್ಲಿಂದ ಏಳಲಿಲ್ಲ ಎನ್ನಲಾಗಿದೆ.ಯಾರ ಮಾತಿಗೆ ಕ್ಯಾರೆ ಅನ್ನದೇ ಯುವಕ ಅಲ್ಲೇ ಕೂತಿದ್ದಾನೆ. ಕೂಡಲೇ ಮಹಿಳೆ ತನ್ನ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಬಳಿಕ ಮಹಿಳೆಯ ಸಂಬಂಧಿಕರು ಬಂದು ಅರ್ಧದಾರಿಯಲ್ಲೇ ಮಹಿಳೆಯನ್ನು ಬಸ್ ನಿಂದ ಕೆಳಗಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮಹಿಳೆ ರೆಡ್ ಆಪ್ ಗೆ ಹಾಗೂ ಭಾರತಿ ಬಸ್ ಕೇಂದ್ರ ಕಚೇರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇದೀಗ ಯುವಕ ಲೇಡಿಸ್ ಸೀಟಿನಲ್ಲಿ ಹೇಗೆ ಸೀಟ್ ಬುಕ್ ಮಾಡಿದ ಎಂಬುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

- Advertisement -

Latest News

error: Content is protected !!