Friday, June 5, 2026
Homeಕರಾವಳಿಮೂಡುಬಿದಿರೆ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಮೀನು ವ್ಯಾಪಾರಿ ಆಸಿಫ್ !

ಮೂಡುಬಿದಿರೆ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಮೀನು ವ್ಯಾಪಾರಿ ಆಸಿಫ್ !

- Advertisement -
- Advertisement -

ಮೂಡುಬಿದಿರೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಮಾರ್ಪಾಡಿಯ ಮೀನು ವ್ಯಾಪಾರಿಯೊಬ್ಬ ಅತ್ಯಾಚಾವೆಸಗಿದ ಘಟನೆ ಮೂಡುಬಿದಿರೆಯ ಮಾರ್ಪಾಡಿಯಲ್ಲಿ ನಡೆದಿದೆ.

ಸ್ಥಳೀಯ ಮೀನು ವ್ಯಾಪಾರಿ ಆಸಿಫ್ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಬಂಧಿತ ಮೀನು ವ್ಯಾಪಾರಿ ಅಸೀಫ್ , ತಾನು ವಾಸವಿದ್ದ ಪರಿಸರದಲ್ಲೇ ವಾಸ್ತವ್ಯವಿದ್ದ ತಮಿಳು ಮೂಲದ ಕೂಲಿ ಕಾರ್ಮಿಕರೊಬ್ಬರ ಅಪ್ರಾಪ್ತ ವಯಸ್ಸಿನ ಮಗಳ ಜತೆ ಈತ ಪರಿಚಯ ಮಾಡಿಕೊಂಡು ಆಕೆಯನ್ನು ಪುಸಲಾಯಿಸಿ ಮನೆ ಹತ್ತಿರದ ಗುಡ್ಡೆಯಲ್ಲಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.

ಈ ಕುರಿತು ಬಾಲಕಿಯ ಹೆತ್ತವರ ದೂರಿನಂತೆ ಆರೋಪಿಯನ್ನು ಪೊಲೀಸರು ಬಂಧಿಸಿ ಫೊಕ್ಸೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗೆ ನ್ಯಾಯಾಲಯ, ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!