Thursday, June 4, 2026
Homeತಾಜಾ ಸುದ್ದಿಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಎಂ.ಎಸ್.ಧೋನಿ

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಎಂ.ಎಸ್.ಧೋನಿ

- Advertisement -
- Advertisement -

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಆದರೆ ಈ ಬಾರಿ ಕ್ರೀಡಾಲೋಕದಲ್ಲಿ ಅಲ್ಲ ಎಂಬುದು ವಿಶೇಷ. ಅಂದರೆ ಈ ಸಲ ಧೋನಿ ಬಂಡವಾಳ ಹೂಡಲು ಮುಂದಾಗಿರುವುದು ಚಿತ್ರರಂಗದಲ್ಲಿ. ಇದಕ್ಕಾಗಿ ಧೋನಿ ಎಂಟರ್‌ಟೈನ್‌ಮೆಂಟ್ ಕಂಪೆನಿಯನ್ನೂ ಕೂಡ ಪ್ರಾರಂಭಿಸಿದೆ. ಈ ಮೂಲಕ ಸಿನಿರಂಗದಲ್ಲಿ ನಿರ್ಮಾಪಕರಾಗಿಯೂ ಧೋನಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಧೋನಿ ಎಂಟರ್‌ಟೈನ್‌ಮೆಂಟ್ ಕಂಪೆನಿಯು ಆರಂಭದಲ್ಲಿ ಕೇವಲ ಮೂರು ಭಾಷೆಗಳಲ್ಲಿ ಮಾತ್ರ ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ.

ನಿರೀಕ್ಷೆಯಂತೆ ಈ ಕಂಪೆನಿಯ ಮೊದಲ ಆದ್ಯತೆ ತಮಿಳು ಸಿನಿಮಾ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿಗೆ ತಮಿಳುನಾಡಿನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಿ ಕಾಲಿವುಡ್ ಮೂಲಕವೇ ಧೋನಿ ಹೊಸ ಇನಿಂಗ್ಸ್ ಆರಂಭಿಸುವುದು ಖಚಿತ. ಇದಲ್ಲದೆ ತೆಲುಗು ಹಾಗೂ ಮಲಯಾಳಂ ಚಿತ್ರಗಳನ್ನೂ ಕೂಡ ನಿರ್ಮಿಸಲಿದೆ. ಅಂದರೆ ಆರಂಭದಲ್ಲಿ ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಸಿನಿಮಾ ನಿರ್ಮಿಸಲು ಧೋನಿ ಎಂಟರ್‌ಟೈನ್‌ಮೆಂಟ್ ಕಂಪೆನಿ ಮುಂದಾಗಿದೆ.

- Advertisement -

Latest News

error: Content is protected !!