Thursday, June 4, 2026
Homeತಾಜಾ ಸುದ್ದಿಪತಿ ನಿಧನವಾದ 2 ವರ್ಷಗಳ ಬಳಿಕ ಮಗ ಜನನ: ಸಾಕಲಾರದೆ ಮಗುವನ್ನು ಮಾರಿದ ತಾಯಿ

ಪತಿ ನಿಧನವಾದ 2 ವರ್ಷಗಳ ಬಳಿಕ ಮಗ ಜನನ: ಸಾಕಲಾರದೆ ಮಗುವನ್ನು ಮಾರಿದ ತಾಯಿ

- Advertisement -
- Advertisement -

ಹೈದರಾಬಾದ್: ಆರ್ಥಿಕ ಸಂಕಷ್ಟದಿಂದ ಹೆತ್ತ ತಾಯಿಯೇ ಮಗುವನ್ನೇ 15 ಸಾವಿರ ರೂ. ಮಾರಾಟ ಮಾಡಿರುವ ಮನ ಮಿಡಿಯುವ ಘಟನೆ ಆಂಧ್ರ ಪ್ರದೇಶ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಪದ್ಮ ಮಗುವನ್ನು ಮಾರಾಟ ಮಾಡಿದ ತಾಯಿಯಾಗಿದ್ದು, ಈಕೆ ಜೀವನ ನಡೆಸಲು ನಿಜಾಮಾಬಾದ್ ಜಿಲ್ಲೆಯ ಗ್ರಾಮಕ್ಕೆ ಒಂದೂವರೆ ವರ್ಷದ ಹಿಂದೆ ಕುಟುಂಬದೊಂದಿಗೆ ವಲಸೆ ಬಂದಿದ್ದಳು. ಕಳೆದ 2 ವರ್ಷಗಳ ಹಿಂದೆ ಪದ್ಮ ಪತಿಯನ್ನು ಕಳೆದುಕೊಂಡಿದ್ದಳು. ಆದಾಗಲೇ ಅವರಿಗೆ ಇಬ್ಬರು ಮಕ್ಕಳಿದ್ದರು. ವಿವಾಹೇತರ ಸಂಬಂಧ ಬೆಳೆಸಿದ್ದ ಆಕೆಗೆ ಅಕ್ಟೋಬರ್ 1ರಂದು ಮಗು ಜನಿಸಿತ್ತು.

ಆದರೆ ಕುಟುಂಬ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಆಕೆ ಮಗುವನ್ನು 15 ಸಾವಿರ ರೂ.ಗಳಿಗೆ ಮಾರಾಟ ಮಾಡಿ ಒಪ್ಪಂದ ಪತ್ರವನ್ನು ಬರೆದುಕೊಟ್ಟಿದ್ದಳು. ಆದರೆ ಈ ಸ್ಥಳಿಯ ಅಂಗನವಾಡಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಧಿಕಾರಿಗಳಿಗೆ ಲಭಿಸಿತ್ತು. ಪೊಲೀಸರು ನೆರವು ಪಡೆದ ಅಧಿಕಾರಿಗಳು ಮಾರಾಟವಾಗಿದ್ದ ಮಗುವನ್ನು ಬುಧವಾರ ವಶಕ್ಕೆ ಪಡೆದು, ಶಿಶು ಕೇಂದ್ರಕ್ಕೆ ಸೇರ್ಪಡೆ ಮಾಡಿದ್ದಾರೆ. ಪ್ರಕರಣ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ

- Advertisement -

Latest News

error: Content is protected !!