Friday, June 5, 2026
Homeತಾಜಾ ಸುದ್ದಿಮಗನ ಜೀವ ಉಳಿಸಲು ತನ್ನ ಕಿಡ್ನಿ ದಾನ ಮಾಡಿದ ಹೆತ್ತ ತಾಯಿ

ಮಗನ ಜೀವ ಉಳಿಸಲು ತನ್ನ ಕಿಡ್ನಿ ದಾನ ಮಾಡಿದ ಹೆತ್ತ ತಾಯಿ

- Advertisement -
- Advertisement -

ಆಂಧ್ರಪ್ರದೇಶ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಗನ ಜೀವ ಉಳಿಸಲು 56 ವರ್ಷದ ತಾಯಿ ತನ್ನ ಕಿಡ್ನಿ ದಾನ ಮಾಡಿದ್ದಾರೆ.


ರೋಗಿಯನ್ನು ಶಿವ ಕೇಶವ ಎಂದು ಗುರುತಿಸಲಾಗಿದ್ದು, ಕಳೆದ ಎರಡು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು ಇದೀಗ ತಾಯಿಯ ಕಿಡ್ನಿಯನ್ನ ಕಸಿ ಮಾಡಲಾಗಿದೆ.


ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂದುಲಾ ಪ್ರದೇಶದ ಕುಟುಂಬ ಚಿಕಿತ್ಸೆಗಾಗಿ ಸಿಟಿಜನ್ಸ್ ಆಸ್ಪತ್ರೆಗೆ ಬಂದಿತ್ತು.ಕೇಶವನ ಸ್ಥಿತಿ ಹದಗೆಟ್ಟಿದ್ದರಿಂದ ವೈದ್ಯರು ಮೂತ್ರಪಿಂಡ ಕಸಿ ಮಾಡುವಂತೆ ಸೂಚಿಸಿದರು. ಆದರೆ ಕಿಡ್ನಿ ದಾನಿಗಳ ಹುಡುಕಾಟಕ್ಕಾಗಿ ತೀವ್ರ ಅಲೆದಾಡಿದ್ದಾರೆ. ಆದರೆ ತಾಯಿಯೆ ಮಗನಿಗೆ ಕಿಡ್ನಿ ನೀಡಿಲು ಮುಂದೆ ಬಂದಿದ್ದಾರೆ.


ಇನ್ನೂ ತಡವಾದರೆ ರೋಗಿಯ ಜೀವಕ್ಕೆ ಅಪಾಯವಿದ್ದ ಕಾರಣ ತಾಯಿಗೆ ಕೌನ್ಸಿಲಿಂಗ್ ನೀಡಿ ಕಿಡ್ನಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ರೋಬೋಟ್-ಅಸಿಸ್ಟೆಡ್ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್ (RAKT) ಮೂಲಕ ಕಿಡ್ನಿ ಜೋಡಣೆ ಮಾಡಲಾಗಿದ್ದು, ರೋಗಿ ಹಾಗೂ ತಾಯಿ ಆರೋಗ್ಯವಾಗಿದ್ದಾರೆ.

- Advertisement -

Latest News

error: Content is protected !!