Monday, May 6, 2024
Homeಕರಾವಳಿಬೆಳ್ತಂಗಡಿ: ಮಗ ಮೃತಪಟ್ಟು 7 ಗಂಟೆ ಅಂತರದಲ್ಲಿ ತಾಯಿಯೂ ನಿಧನ

ಬೆಳ್ತಂಗಡಿ: ಮಗ ಮೃತಪಟ್ಟು 7 ಗಂಟೆ ಅಂತರದಲ್ಲಿ ತಾಯಿಯೂ ನಿಧನ

spot_img
- Advertisement -
- Advertisement -

ಬೆಳ್ತಂಗಡಿ: ಎಂಡೋಸಲ್ಫಾನ್ ಪೀಡಿತರಾಗಿ ಬುದ್ದಿಮಾಧ್ಯರಾಗಿದ್ದ ವ್ಯಕ್ತಿ ಮೃತಪಟ್ಟು ಅವರ ಅಂತ್ಯಸಂಸ್ಕಾರಕ್ಕೆ ಮುನ್ನವೇ ಏಳೂವರೆ ಗಂಟೆ ಅಂತರದಲ್ಲಿ ಅವರ ವೃದ್ದೆ ತಾಯಿಯೂ ಮೃತಪಟ್ಟ ಘಟನೆ ತಾಲೂಕಿನ ನಡ ಗ್ರಾಮದ ಸುರ್ಯ ಕಾನಂಗದಲ್ಲಿ ನಡೆದಿದೆ.

ಸೆ. 1ರಂದು ಸಂಜೆ 7.30 ರ ವೇಳೆಗೆ ಕೃಷ್ಣ ಭಟ್(72ವ.) ಮೃತಪಟ್ಟರೆ, ಅವರ ತಾಯಿ ಲಕ್ಷ್ಮೀಅಮ್ಮ (92ವ.) ಅವರು ಸೆ. 2 ರಂದು ಬೆಳಗ್ಗಿನ ಜಾವಾ 4.00 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಕೃಷ್ಣ ಭಟ್ ಅವರು ಎಂಡೋಸಲ್ಫಾನ್ ಪೀಡಿತರು ಮತ್ತು ಬುದ್ದಿಮಾಂದ್ಯರಾಗಿದ್ದರು. ಅವಿವಾಹಿತರಾಗಿದ್ದ ಅವರನ್ನು ಸಹೋದರರೇ ಸಲಹುತ್ತಿದ್ದರು. ಸೆ. 1 ರಂದು ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆಯೇ ಅವರು ಅಸುನೀಗಿದ್ದರು. ನಿಯಮದಂತೆ ಅವರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಸೆ. 2 ರಂದು ವರದಿ ಬಂದ ವೇಳೆ ಅವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು.

ಈ ಮಧ್ಯೆಯೇ ಸೆ. 2 ರಂದು ಬೆಳಗ್ಗಿನ ಜಾವಾ ಅವರ ತಾಯಿ, ಈ ಮೊದಲೇ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮೀಅಮ್ಮ ಅವರೂ ಕೊನೆಯುಸಿರೆಳೆದಿದ್ದಾರೆ.

ಜೊತೆಯಾಗಿ ನಡೆದ ತಾಯಿ -ಮಗನ ಅಂತ್ಯಸಂಸ್ಕಾರ
ಸೆ. 2 ರಂದು ಮಧ್ಯಾಹ್ನ ವೇಳೆ ತಾಯಿ ಮತ್ತು ಮಗನ ಅಂತ್ಯಸಂಸ್ಕಾರ ಉಜಿರೆಯ ಮೋಕ್ಷಧಾಮ ರುದ್ರಭೂಮಿಯಲ್ಲಿ ಜೊತೆಯಾಗಿ ನೆರವೇರಿತು. ಮೃತ ಪುತ್ರ ಕೃಷ್ಣ ಭಟ್ ಅವರಿಗೆ ಕೊರೊನಾ ದೃಢಪಟ್ಟಿದ್ದುದರಿಂದ ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಅವರ ಮಾರ್ಗದರ್ಶನದಲ್ಲಿ ಸರಕಾರಿ ನಿಯಮದಂತೆ ಅಂತ್ಯಸಂಸ್ಕಾರ ನಡೆಯಿತು.

ಮಾನವ ಸ್ಪಂದನ ಕೋವಿಡ್ ತಂಡದಿಂದ ಅಂತ್ಯಸಂಸ್ಕಾರಕ್ಕೆ ಸಹಕಾರ:
ಮೃತ ಕೃಷ್ಣ ಭಟ್ ಅವರ ಅಂತ್ಯಸಂಸ್ಕಾರವನ್ನು ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್‌ ತಂಡದ ವತಿಯಿಂದ ಸರಕಾರಿ ನಿಯಮಾವಳಿಯಂತೆ ನಡೆಯಿತು. ಪಿಪಿಇ ಕಿಟ್ ಸಹಿತ ರಕ್ಷಣಾತ್ಮಕ ವ್ಯವಸ್ಥೆಯೊಂದಿಗೆ ಸೋಲ್ಜರ್ಸ್‌ ಗಳಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ದೀಪಕ್ ಜಿ, ರೋಹಿತ್, ರಂಜಿತ್ ಶೆಟ್ಟಿ ಮತ್ತು ಹಿಂದೂಪುರ ಬಳೆಂಜದ ವೀರಕೇಸರಿ ಆಂಬುಲೆನ್ಸ್‌ನ ಪದ್ಮನಾಭ ಅವರು ನೆರವೇರಿಸಿದರು.

ಮಾನವ ಸ್ಪಂದನದ‌ ಮುಖ್ಯಸ್ಥ ಪಿ.ಸಿ ಸೆಬಾಸ್ಟಿಯನ್, ತಂಡದ‌ ನಾಯಕ ಅಶ್ರಫ್ ಆಲಿಕುಂಞಿ ಮತ್ತು ಸದಸ್ಯ ಪ್ರದೀಪ್ ಶೆಟ್ಟಿ ಸಹಕರಿಸಿದರು. ಉಜಿರೆ ರುದ್ರಭೂಮಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಾಮಚಂದ್ರ ಶೆಟ್ಟಿ ಮತ್ತು ಕೇಶವ ಭಟ್ ಅತ್ತಾಜೆ ಅವರು ಮೃತರ ಕುಟುಂಬದವರಿಗೆ ನೆರವಾದರು.

- Advertisement -
spot_img

Latest News

error: Content is protected !!