- Advertisement -
![]()
- Advertisement -
ಕಾರ್ಕಳ; ತಾಯಿ ಅಕಾಲಿಕ ನಿಧನದಿಂದ ನೊಂದು ಮಗಳು ಕೂಡ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಈದು ನೂರಾಲ್ ಬೆಟ್ಟು ಕಜೆ ಎಂಬಲ್ಲಿ ನಡೆದಿದೆ.
ಅನಾರೋಗ್ಯಕ್ಕೆ ತುತ್ತಾಗಿದ್ದ ಭಾಗಿ(65) ಎಂಬವರು ಮಂಗಳವಾರ ಬೆಳಿಗ್ಗೆ ಸುಮಾರು 10 ವೇಳೆಹೆ ಮನೆಯಲ್ಲಿ ಮೃತಪಟ್ಟಿದ್ದರು. ಅವರ ಮಗಳು ರೇಖಾ(25) ಈ ವೇಳೆ ಎಂದಿನಂತೆ ನಾರಾವಿಯ ಫ್ಯಾನ್ಸಿ ಅಂಗಡಿಗೆ ಕೆಲಸಕ್ಕೆ ಹೋಗಿದ್ದರು. ತಾಯಿ ಸಾವನ್ನಪ್ಪುತ್ತಿದ್ದಂತೆ ಪರಿಚಯಸ್ಥರೊಬ್ಬರು ರೇಖಾಗೆ ಕರೆ ಮಾಡಿ ತಾಯಿಗೆ ಸೌಖ್ಯವಿಲ್ಲ ಮನೆಗೆ ಬಾ ಎಂದಿದ್ದಾರೆ.
ತಾಯಿಗೆ ಏನಾಯ್ತು ಅನ್ನೋ ಆತಂಕದಲ್ಲಿ ಮನೆಗೆ ಬರುತ್ತಲೇ ದಾರಿಯಲ್ಲಿ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.
- Advertisement -


