Friday, June 27, 2025
Homeಕರಾವಳಿಇಂಡಿಯನ್‌ ಐಡೋಲ್‌ ಅಂತಿಮ ಕಣದಲ್ಲಿ ಮೂಡುಬಿದಿರೆ ನಿಹಾಲ್ ತಾವ್ರೋ!

ಇಂಡಿಯನ್‌ ಐಡೋಲ್‌ ಅಂತಿಮ ಕಣದಲ್ಲಿ ಮೂಡುಬಿದಿರೆ ನಿಹಾಲ್ ತಾವ್ರೋ!

spot_img
- Advertisement -
- Advertisement -

ಮೂಡುಬಿದಿರೆ: ಮೂಡುಬಿದಿರೆಯ ಕಡಲಕೆರೆ ಪರಿಸರದ ನಿಹಾಲ್‌ ತಾವ್ರೋ ಸೋನಿ ಟಿವಿಯ ಇಂಡಿಯನ್‌ ಐಡೋಲ್‌ ಗಾಯನ ರಿಯಾಲಿಟಿ ಶೋ ಸ್ಪರ್ಧೆಯ ಅಂತಿಮ ಕಣಕ್ಕೆ ಆಯ್ಕೆಯಾಗಿದ್ದಾರೆ.

ಮೂರನೇ ತರಗತಿಯಲ್ಲಿರುವಾಗಲೇ ಆಲ್ಬಂ ಸಾಂಗ್‌ ಒಂದಕ್ಕೆ ಯಾವುದೇ ತರಬೇತಿ, ರಿಹರ್ಸಲ್‌ ಇಲ್ಲದೆ ಹಾಡಿದ್ದ ನಿಹಾಲ್‌ ಅಳ್ವಾಸ್‌ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿ.ನಾದಬ್ರಹ್ಮ ಹಂಸಲೇಖ, ಗಾಯಕ ವಿಜಯ ಪ್ರಕಾಶ್‌ ರವರಿಂದ ಭೇಷ್ ಎನಿಸಿಕೊಂಡಿದ್ದ ನಿಹಾಲ್ ತಾವ್ರೋ ಈಗ ಅಂತಿಮ ಕಣಕ್ಕೆ ಆಯ್ಕೆಯಾಗಿ ಕರ್ನಾಟಕವನ್ನು ಹೆಮ್ಮೆ ಪಡಿಸಿದ್ದಾರೆ.

ಕನ್ನಡ, ತುಳು, ಕೊಂಕಣಿ ಸಹಿತ ಹಲವು ಸಿನೆಮಾಗಳಲ್ಲಿ ಕೂಡ ತಮ್ಮ ಗಾಯನದ ಛಾಪು ಮೂಡಿಸಿದ್ದಾರೆ. ನಿಹಾಲ್ ಆವರನ್ನು ಬೆಂಬಳಿಸಲು ಹಾಗೂ ಗೆಲ್ಲಿಸಲೂ ಆ. 14ರ ವರೆಗೆ ಸೋನಿ ಆಯಪ್‌ ಹಾಗೂ firstcry.com ಮೂಲಕ ಮತಗಳನ್ನು ಚಲಾಯಿಸಿ ಬೆಂಬಲವನ್ನು ವ್ಯಕ್ತ ಪಡಿಸಬಹುದು.

- Advertisement -
spot_img

Latest News

error: Content is protected !!