Thursday, June 4, 2026
Homeಕರಾವಳಿಮಂಗಳೂರುಮೂಡಬಿದಿರೆ: ಸಿಡಿಲು ಬಡಿದು ಮನೆಯೊಂದಕ್ಕೆ ಅಪಾರ ಪ್ರಮಾಣದ ಹಾನಿ

ಮೂಡಬಿದಿರೆ: ಸಿಡಿಲು ಬಡಿದು ಮನೆಯೊಂದಕ್ಕೆ ಅಪಾರ ಪ್ರಮಾಣದ ಹಾನಿ

- Advertisement -
- Advertisement -

ಮೂಡಬಿದಿರೆ: ಸಿಡಿಲು ಬಡಿದು ಮನೆಯೊಂದಕ್ಕೆ ಅಪಾರ ಪ್ರಮಾಣದ ಹಾನಿಯುಂಟಾಗಿರುವ ಘಟನೆ ಮೂಡಬಿದಿರೆಯ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚೆಬೈಲು ಕುಂಗೂರು ಎಂಬಲ್ಲಿ  ನಡೆದಿದೆ.

ಕಂಚಿಬೈಲು ಕುಂಗೂರು ನಿವಾಸಿ ವಾಸು ಮುಗೇರ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯೊಳಗಿನ ವಿದ್ಯುತ್ ಉಪಕರಣಗಳು ಸೇರಿದಂತೆ ಇತರೆ ಸೊತ್ತುಗಳು ಸಿಡಿಲಾಘಾತದಿಂದ ಸಂಪೂರ್ಣವಾಗಿ ಹಾಳಾಗಿವೆ. ಘಟನೆಯಿಂದಾಗಿ ಮನೆಯ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ದಯಾನಂದ ಕೊಡ್ಯಡ್ಕ ಹಾಗೂ ಪಂಚಾಯಿತಿ ಸದಸ್ಯೆ ಸುಮಾ ಭಟ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

- Advertisement -

Latest News

error: Content is protected !!