Thursday, June 4, 2026
Homeಕರಾವಳಿಕುಡ್ಲದ ಆಟೋ ರಾಜ ಖ್ಯಾತಿಯ ಮೋಂತು ಲೋಬೋ ಅನಾರೋಗ್ಯದಿಂದ ನಿಧನ

ಕುಡ್ಲದ ಆಟೋ ರಾಜ ಖ್ಯಾತಿಯ ಮೋಂತು ಲೋಬೋ ಅನಾರೋಗ್ಯದಿಂದ ನಿಧನ

- Advertisement -
- Advertisement -

ಮಂಗಳೂರು: ಕುಡ್ಲದ ‘ಆಟೋ ರಾಜ’ ಎಂದೇ ಖ್ಯಾತಿಯಾಗಿದ್ದ, ಮಂಗಳೂರಿನ ಹಿರಿಯ ಆಟೋ ಚಾಲಕ ಮೋಂತು ಲೋಬೋ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮಂಗಳೂರಿನ ಮೊದಲ ಲೈಸೆನ್ಸ್ ಹೊಂದಿದ್ದ ಆಟೋ ಚಾಲಕ ಎಂಬ ಹೆಮ್ಮೆಗೂ ಇವರು ಪಾತ್ರರಾಗಿದ್ದರು.

86 ವರ್ಷದ ಇಳಿವಯಸ್ಸಿನಲ್ಲೂ ಆಟೋ ಓಡಿಸೋ ಮೂಲಕ ಎಲ್ಲರ ಗಮನ ಸೆಳೆದಿದ್ರು. ಆದ್ರೆ ಅನಾರೋಗ್ಯದ ಕಾರಣ ಮಂಗಳೂರಿನ ವೆಲೆನ್ಸಿಯಾ ಬಳಿಯ ತಮ್ಮ ನಿವಾಸದಲ್ಲಿ ಮೋಂತು ಲೋಬೋ ಕೊನೆಯುಸಿರೆಳೆದಿದ್ದಾರೆ. ಆಶ್ಚರ್ಯ ಅಂದ್ರೆ ಇವರು ಕೊನೆಯ ದಿನಗಳವರೆಗೂ ಆಟೋ ಓಡಿಸ್ತಿದ್ದರು. ಇವರು ರಾಜ್ಯಮಟ್ಟದ ಸಾರಥಿ ನಂಬರ್‌ – ೧ ಪ್ರಶಸ್ತಿಗೆ ಪಾತ್ರರಾಗಿದ್ರು.

- Advertisement -

Latest News

error: Content is protected !!