- Advertisement -
![]()
- Advertisement -
ಬೆಂಗಳೂರು ಸಮೀಪದ ಚನ್ನಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ಸ್ಥಳೀಯ ಮಂಗಗಳಿಗೆ ಪ್ರತಿದಿನ ತಪ್ಪದೇ ಆಹಾರ ನೀಡುತ್ತಿದ್ದ 85 ವರ್ಷದ ಪಾರ್ವತಮ್ಮ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಈ ಸಂದರ್ಭದಲ್ಲೊಂದು ಅಪರೂಪದ ಮತ್ತು ಮನಮಿಡಿಯುವ ದೃಶ್ಯವೊಂದು ಕಂಡುಬಂದಿದೆ. ಅವರ ಅಂತ್ಯಕ್ರಿಯೆಯ ಸಿದ್ಧತೆ ನಡೆಯುತ್ತಿದ್ದಾಗ ಸ್ಥಳಕ್ಕೆ ಬಂದ ಮಂಗವೊಂದು, ಪಾರ್ವತಮ್ಮ ಅವರ ಪಾರ್ಥಿವ ಶರೀರವನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತಿದೆ. ಎಷ್ಟೇ ಪ್ರಯತ್ನಿಸಿದರೂ ವೃದ್ಧೆಯ ದೇಹವನ್ನು ಬಿಟ್ಟು ಕದಲದ ಮಂಗನ ಈ ಮಮತೆ ಕಂಡು ನೆರೆದಿದ್ದವರು ಬೆರಗಾಗಿದ್ದಾರೆ.
- Advertisement -


