Monday, May 20, 2024
Homeಕರಾವಳಿಉಡುಪಿಮಲ್ಪೆಯಲ್ಲಿ ರೂಂಗೆ ನುಗ್ಗಿ ಲಕ್ಷಾಂತರ ರೂಪಾಯಿ ಕಳವು

ಮಲ್ಪೆಯಲ್ಲಿ ರೂಂಗೆ ನುಗ್ಗಿ ಲಕ್ಷಾಂತರ ರೂಪಾಯಿ ಕಳವು

spot_img
- Advertisement -
- Advertisement -

ಮಲ್ಪೆ : ರೂಮಿಗೆ ನುಗ್ಗಿದ ಕಳ್ಳರು, ಮೀನುಗಾರಿಕೆಗೆ ಸಂಬಂಧಿಸಿದಂತೆ ಇರಿಸಿದ್ದ ಲಕ್ಷಾಂತರ ರೂ. ಹಣವನ್ನು ಕಳವು ಮಾಡಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.

ಮೇ 7 ಮತ್ತು 8 ರಂದು ಮೀನು ವ್ಯಾಪಾರದಿಂದ ಬಂದ ಒಟ್ಟು 10ಲಕ್ಷದ 30 ಸಾವಿರ ರೂ. ಹಣವನ್ನು ಎಸ್‌ಡಿಡಿಕೆ ಮೀನುಪಾರ್ಟಿಯ ರೈಟರ್ ಸುರೇಶ್ ಲಮಾಣಿ ಕೊಳದಲ್ಲಿರುವ ತನ್ನ ರೂಮಿನಲ್ಲಿ ಬಾಕ್ಸಿನ ಒಳಗೆ ಇಟ್ಟು ಮಲ್ಪೆ ಬಂದರಿಗೆ ಕೆಲಕ್ಕೆ ಹೋಗಿದ್ದರು.

ಈ ವೇಳೆ ರೂಮಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬಾಕ್ಸ್ ನಲ್ಲಿ ಇಟ್ಟ 10ಲಕ್ಷದ 30 ಸಾವಿರ ರೂಪಾಯಿ ನಗದಿನಲ್ಲಿ 8 ಲಕ್ಷದ 90 ಸಾವಿರ ರೂಪಾಯಿಯನ್ನು ಕಳವು ಮಾಡಿ, ಉಳಿದ 1 ಲಕ್ರೂಷದ 40 ಸಾವಿರ ರೂಪಾಯಿಯನ್ನು ಬಾಕ್ಸ್‌ನಲ್ಲಿಯೇ ಇಟ್ಟು ಹೋಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -
spot_img

Latest News

error: Content is protected !!