Tuesday, July 2, 2024
Homeಕ್ರೀಡೆಭಾರತೀಯ ಕ್ರಿಕೆಟ್‌ ತಂಡಕ್ಕೆ ದೂರವಾಣಿ ಕರೆ ಮೂಲಕ ಶುಭ ಹಾರೈಸಿದ ಮೋದಿ

ಭಾರತೀಯ ಕ್ರಿಕೆಟ್‌ ತಂಡಕ್ಕೆ ದೂರವಾಣಿ ಕರೆ ಮೂಲಕ ಶುಭ ಹಾರೈಸಿದ ಮೋದಿ

spot_img
- Advertisement -
- Advertisement -

ನವದೆಹಲಿ: 17 ವರ್ಷಗಳ ಬಳಿಕ ಎರಡನೇ ಬಾರಿ ಟಿ-20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿ ಕ್ರಿಕೆಟ್‌ ಚಾಂಪಿಯನ್‌ ಆದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಕನ್ನಡಿಗ ದ್ರಾವಿಡ್‌ ಬಗ್ಗೆ, “ಭಾರತೀಯ ಕ್ರಿಕೆಟ್‌ ತಂಡದೊಂದಿಗಿನ ದ್ರಾವಿಡ್‌ ಅವರ ಅಚಲ ಬದ್ಧತೆ, ಕಾರ್ಯತಂತ್ರ, ಪ್ರತಿಭೆಯಿಂದ ಭಾರತ ತಂಡದಲ್ಲಿ ಬದಲಾವಣೆ ತಂದಿದ್ದಾರೆ. ಇವರ ಕೊಡುಗೆಯು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕ” ಎಂದು ಕೊಂಡಾಡಿ ಬರೆದಿದ್ದಾರೆ.

https://x.com/narendramodi/status/1807284727306731600?

ಇನ್ನು ಪ್ರಧಾನಿ ಮೋದಿ ವಿರಾಟ್‌ ಕೊಹ್ಲಿ ಜೊತೆ ಮಾತನಾಡಿ, “ ನಿಮ್ಮೊಂದಿಗೆ ಮಾತನಾಡಿ ಸಂತೋಷವಾಯಿತು. ಫೈನಲ್‌ ಪಂದ್ಯದ ಇನ್ನಿಂಗ್ಸ್‌ ಭಾರತ ತಂಡಕ್ಕೆ ಆಧಾರವಾಗಿತ್ತು. ಎಲ್ಲ ವಿಧದ ಕ್ರಿಕೆಟ್‌ ಮಾದರಿಯಲ್ಲೂ ಭವ್ಯವಾಗಿ ಬ್ಯಾಟಿಂಗ್‌ ನಡೆಸಿದ್ದೀರಿ. ಟಿ-20 ಕ್ರಿಕೆಟ್‌ ನಿಮ್ಮನ್ನು ಮಿಸ್‌ ಮಾಡಿಕೊಳ್ಳಲಿದೆ. ಆದರೆ ನೀವು ಯುವ ಪೀಳಿಗೆಯ ಆಟಗಾರರನ್ನು ಪ್ರೇರೇಪಿಸುತ್ತೀರಿ ಎಂಬ ವಿಶ್ವಾಸ ಹೊಂದಿದ್ಧೇನೆ” ಎಂದರು.

ತಂಡದ ನಾಯಕ ರೋಹಿತ್‌ ಶರ್ಮಾ ಜೊತೆಗೆ “ನಿಮ್ಮದು ಶ್ರೇಷ್ಠ ವ್ಯಕ್ತಿತ್ವ, ನಿಮ್ಮ ಆಕ್ರಮಣಕಾರಿ ಮನಸ್ಥಿತಿ, ಬ್ಯಾಟಿಂಗ್‌, ನಾಯಕತ್ವ ಭಾರತ ತಂಡಕ್ಕೆ ಹೊಸ ಆಯಾಮ ನೀಡಿದೆ. ಇಂದು ನಿಮ್ಮೊಂದಿಗೆ ಮಾತನಾಡಿ ಬಹಳ ಸಂತೋಷವಾಯಿತು” ಎಂದರು.

ಇನ್ನು ಟಿ-20 ಫೈನಲ್‌ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪಾಂಡ್ಯ ಹಾಗೂ ಸೂರ್ಯ ಕುಮಾರ್‌ ಯಾದವ್‌ಗೂ ಪ್ರಧಾನಿ ಮೋದಿ ಪ್ರಶಂಸಿದ್ದಾರೆ. ಐತಿಹಾಸಿಕ ಗೆಲುವು ಸಾಧಿಸಿದ್ದಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಶುಭ ಹಾರೈಸಿದ್ದಾರೆ.

- Advertisement -
spot_img

Latest News

error: Content is protected !!