Thursday, June 4, 2026
Homeತಾಜಾ ಸುದ್ದಿ3ನೇ ಬಾರಿಗೆ ಮೋದಿ ಪ್ರಧಾನಿ; ಜೂನ್‌ 8 ರಂದು ಸಂಜೆ ಪ್ರಮಾಣ ವಚನ ಸಾಧ್ಯತೆ

3ನೇ ಬಾರಿಗೆ ಮೋದಿ ಪ್ರಧಾನಿ; ಜೂನ್‌ 8 ರಂದು ಸಂಜೆ ಪ್ರಮಾಣ ವಚನ ಸಾಧ್ಯತೆ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಂಪುಟ ಸಭೆ ಇಂದು ನಡೆಯಿತು. ಈ ವೇಳೆಯಲ್ಲಿ 17ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಲಾಯಿತು. 

ಇನ್ನು ಜೂನ್ 8ರಂದು ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಎನ್‌ಡಿಎ ಒಕ್ಕೂಟ ಸರಳ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. 

ಟಿಡಿಪಿ ಹಾಗೂ ಜೆಡಿಯು ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆಯಿದೆ ಎನ್ನುವ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ಪೋಸ್ಟ್ ಮಾಡಿದೆ.

- Advertisement -

Latest News

error: Content is protected !!